ನ್ಯೂಸ್

ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ 18 ತಿಂಗಳಲ್ಲಿ 55 ಕೆಜಿ ಕಳೆದುಕೊಂಡ ನಟ! Actor losing 55 kgs in 18 months

Actor losing 55 kgs in 18 months:  ಖ್ಯಾತ ನಟ ರಾಮ್​​ ಕಪೂರ್​ ಅವರು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗದೆ 18 ತಿಂಗಳೀನಲ್ಲಿ 55 ಕೆಜಿ ತೂಕವನ್ನು ಕಳೆದುಕೊಂಡಿದ್ದಾರಂತೆ. ಈ ಸುದ್ದಿ ಸಖತ್​ ವೈರಲ್​ ಆಗಿದೆ.

"ನನ್ನ ತೂಕದಲ್ಲಿ ನಾನು 140 ಕೆಜಿ ಇದ್ದೆ. ಈಗ 85 ಕೆಜಿ ಆಗಿದ್ದೇನೆ. ನಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ... ವ್ಯಾಯಾಮ ಹಾಗೂ ಸರಿಯಾದ ಆಹಾರ ಪದ್ಧತಿ ಹಾಗೂ ಶಿಸ್ತುಬದ್ಧ ಜೀವನದಿಂದ ತೂಕವನ್ನು ಕಡಿಮೆ ಮಾಡಿಕೊಂಡಿದ್ದೇನೆ. ಇಂದು ನಾನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಮತ್ತೆ ನನ್ನ 25 ವರ್ಷ ವಯಸ್ಸಿನವರಂತೆ ಭಾವಿಸುತ್ತೇನೆ. ನಾನು 12 ಗಂಟೆಗಳ ಕಾಲ ನಿಲ್ಲದೆ ನಡೆಯಬಲ್ಲೆ " ರಾಮ್, ತನ್ನ ತೂಕ ಇಳಿಸುವ ಪ್ರಯಾಣದಿಂದ ಸಂತೋಷಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.

51 ರ ಹರೆಯದ ರಾಮ್ ಕಪೂರ್ ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಖ್ಯಾತಿ ಪಡೆದವರು, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ನಟರಲ್ಲಿ ಒಬ್ಬರು, ಕಸಮ್ ಸೆ, ಬಡೆ ಅಚ್ಛೇ ಲಗತೆ ಹೇ ಮೂಲಕ ಮನೆ ಮಾತಾದ ನಟ.

ತೂಕವನ್ನು ಏಕಾಏಕಿ ಕಳೆದುಕೊಳ್ಳುವುದನ್ನು ಅಪಾಯಕಾರಿ, ತೀವ್ರವಾದ ಆಹಾರಗಳು, ಔಷಧಿಗಳು ಅಥವಾ ಶಸ್ತ್ರಚಿಕಿತ್ಸಾ ವಿಧಾನ ಕೂಡ ಅಪಾಯಕಾರಿ ಕೆಲಸ ಎಂದು ಹೇಳಲಾಗಿದೆ.  ಆಹಾರ, ವ್ಯಾಯಾಮ ಮತ್ತು ನಿದ್ರೆಯನ್ನು ಒಳಗೊಂಡಿರುವ ಜೀವನಶೈಲಿಯ ಬದಲಾವಣೆಗಳ ಮೂಲಕ ಸಮರ್ಥನೀಯ ತೂಕ ನಷ್ಟವನ್ನು ಸಾಧಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸತತವಾಗಿ ಒತ್ತಿಹೇಳುತ್ತಾರೆ.