ಮುಂಬೈ: ಟಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ( Ram Gopal Varma ) ಹೊಸ ವರ್ಷದ ಹಿನ್ನೆಲೆ ಕೆಲವು ಆಘಾತಕಾರಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರಂತೆ. ಈ ನಿಟ್ಟಿನಲ್ಲಿ ನಿರ್ದೇಶಕರು 2025 ರಲ್ಲಿ ಅವರ ನಿರ್ಣಯಗಳ ಬಗ್ಗೆ ಹೇಳುವ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ವೈರಕ್ ಆಗುತ್ತಿದ್ದಂತೆ ನೆಟ್ಟಿಗರು ತರಹೆವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಈ ವರ್ಷ ನಾನು ತೆಗೆದುಕೊಂಡ 7 ನಿರ್ಣಯ
'ಇವನ್ನೆಲ್ಲ ನಾನು ಖಂಡಿತಾ ಅನುಸರಿಸುತ್ತೇನೆ ಎಂದು ನಿಮ್ಮೆಲ್ಲರ ಮೇಲೆ ಆಣೆ ಹಾಕುತ್ತೇನೆ. ರಾಮ್ ಗೋಪಾಲ್ ವರ್ಮಾ ತಮ್ಮದೇ ಶೈಲಿಯಲ್ಲಿ ಟ್ವಿಸ್ಟ್ ನೀಡಿದ್ದಾರೆ. ಜೊತೆಗೆ ಎಲ್ಲರಿಗೂ 'ಹೊಸ ವರ್ಷದ ಶುಭಾಶಯಗಳು' ಎಂದು ಶುಭ ಹಾರೈಸಿದರು.
ಸದ್ಯ ರಾಮ್ ಗೋಪಾಲ್ ವರ್ಮಾ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಸಿನಿಮಾ ಅಭಿಮಾನಿಗಳು ಹಾಗೂ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 'ಇದೆಲ್ಲ ಮಾಡೋಕೆ ಆಗಲ್ಲ ವರ್ಮಾ'... ನಿಮ್ಮಿಂದ ಅಲ್ಲ ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.