ನ್ಯೂಸ್

ತಗಡು, ಗುಲಾಮಾ ಅಂತ ಹೇಳಿದವರಿದ್ದಾರೆ..ಗೂಬೆ ಅಂದಿದ್ದಕ್ಕೆ ನನ್ನ ತಂದೆನ ರೋಡಿಗೆ ನಿಲ್ಲಿಸಿಬಿಟ್ಟರು

ಬೆಂಗಳೂರು: ಬಿಗ್​ಬಾಸ್​ ಸೀಸನ್​​ 10 ಸ್ಪರ್ಧಿಯಲ್ಲಿ ಒಬ್ಬರಾಗಿದ್ದ ರಕ್ಷಕ್​​ ಬುಲೆಟ್. ರಕ್ಷಕ್​​​​ ದೊಡ್ಡಮನೆಯಲ್ಲಿನ ಆಚ ವೀಕ್ಷಕರಿಗೆ ಇಷ್ಟವಾಗಲಿಲ್ಲ. ಕೆಲವೆ ವಾರಕ್ಕೆ ಮನೆಯಿಂದ ಆಚೆ ಬಂದ್ರು. ಮನೆಯಿಂದ ಹೊರ ಬರ್ತಿದ್ದಂತೆ ರಕ್ಷಕ್​​ ಖಾಸಗಿ ಟಿವಿ ಚಾನೆಲ್​ಗಳಲ್ಲಿ ನೀಡುವ ಸಂದರ್ಶನಗಳಲ್ಲಿ ಬಿಗ್​ಬಾಸ್​ ಹಾಗೂ ನಟ ಸುದೀಪ್ ಕುರಿತಾಗಿ ಮಾತನಾಡಿ ಸುದ್ದಿಯಾಗಿದ್ದರು. ಇದೀಗ ಮತ್ತೆ ರಕ್ಷಕ್​ ಸುದ್ದಿಯಲ್ಲಿದ್ದಾರೆ.

ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆಗಿ ಬಂದ ಬಳಿಕ ಅವರು ಕೆಲವು ಕಡೆಗಳಲ್ಲಿ ನೀಡಿದ ಸಂದರ್ಶನದಲ್ಲಿ ಆಡಿದ ಮಾತುಗಳು ಟೀಕೆಗೆ ಒಳಗಾಗಿವೆ. ಅದರಲ್ಲೂ ಕಿಚ್ಚ ಸುದೀಪ್​ ಬಗ್ಗೆ ರಕ್ಷಕ್​ ನೀಡಿದ ಹೇಳಿಕೆಗಳಿಗೆ ಅಭಿಮಾನಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ನಂತ್ರ ಸುದೀಪ್​ ಅವರ ಬಳಿ ರಕ್ಷಕ್​ ಕ್ಷಮೆ ಕೆಳಿ ಟ್ವೀಟ್​​ ಕೂಡಾ ಮಾಡಿದ್ದರು. ನಂತರ ಎಲಿಮಿನೇಟ್​ ಆದ ಸ್ಪರ್ಧಿಗಳಿಗೆ ಮತ್ತೊಮ್ಮೆ ಅತಿಥಿಗಳಾಗಿ ಬಿಗ್​ ಬಾಸ್​ ಮನೆಗೆ ಕಾಲಿಡಲು ಅವಕಾಶ ನೀಡಲಾಗಿತ್ತು ಬಾಸ್​ ಮನೆಯೊಳಗೆ ಬಂದ ಅವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿರುವುದು ಸುದೀಪ್​ ಅವರ ಕೋಪಕ್ಕೆ ಕಾರಣ ಆಗಿತ್ತು. ‘ಆ ಸ್ಪರ್ಧಿ ಹೆಸರು ರಕ್ಷಕ್​ ಅಲ್ವಾ? ಬುಲೆಟ್ ಪ್ರಕಾಶ್​ ಅವರ ಮಗ ಅಲ್ವಾ..?​​ ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ’ ಎಂದು ಸುದೀಪ್​ ಗರಂ ಆಗಿದ್ದರು.

ಹಾಸ್ಯನಟ ಬುಲೆಟ್​ ಪ್ರಕಾಶ್​​ ಪುತ್ರ, ರಕ್ಷಕ್ ಬುಲೆಟ್​ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿ, ರಕ್ಷಕ್‌ ಗೂಬೆ ಅಂತ ಹೇಳಿದ್ದಾನೆ ಅಂತ ಅಂದ್ರೆ ನನಗೆ ಬೇಸರ ಆಗುತ್ತಿರಲಿಲ್ಲ. ಅಲ್ಲಿ ನನ್ನ ತಂದೆ ಹೆಸರು ಬರುತ್ತೆ, ಬುಲೆಟ್ ಪ್ರಕಾಶ್ ಮಗ ರಸ್ತೆಯಲ್ಲಿ ಹೋಗುವವರಿಗೆ ಗೂಬೆ ಅಂತ ಹೇಳಿದ್ರೆ ಸುಮ್ಮನೆ ಇರ್ತಾರಾ? ಸುದೀಪ್ ಅಣ್ಣ ಸೀನಿಯರ್ ಓಕೆ ಅದಕ್ಕೆ ನಾನು ಬೆಲೆ ಕೊಟ್ಟಿದೀನಿ ಎಲ್ಲಾನೂ ತೆಗೆದುಕೊಂಡು ಹೋಗಲು ಆಗಲ್ಲ. ನನಗೆ ಅಂತ ಫ್ಯಾಮಿಲಿ ಇದೆ ನನ್ನನ್ನು ಪ್ರೀತಿ ಮಾಡುವ ಜನರು ಇರುತ್ತಾರೆ. ನ್ಯಾಯ ಪ್ರತಿಯೊಬ್ಬರಿಗೂ ಒಂದೇ ಇರಬೇಕು. ಅಮ್ಮನ್, ತಗಡು, ಗುಲಾಮಾ ಅಂತ ಹೇಳಿರುವ ಪದಗಳು ಕೇಳಿಸಿರಲಿಲ್ಲ. ನಾನು ರೆಗ್ಯೂಲರ್ ಆಗಿ ಬಳಸುವ ಪದಗಳು ನಾನು ಇರುವುದೇ ಹೀಗೆ ನಾನು ಯಾರಿಗೂ ಕೇರ್ ಮಾಡುವುದಿಲ್ಲ ಆದರೆ ಬಿಗ್ ಬಾಸ್ ಮನೆಯಲ್ಲಿ ನಾನು ಏನೂ ಬಳಸಿಲ್ಲ. ಬುಲೆಟ್ ಪ್ರಕಾಶ್‌ ಮಗನನ್ನು ಸಾವಿರಾರು ಮಂದಿ ನೋಡುತ್ತಾರೆ ಅಲ್ಲದೆ ಬಿಗ್ ಬಾಸ್ ಬೆಲೆ ನನಗೆ ಗೊತ್ತಿದೆ ಅದನ್ನು ನಾನು ಗೌರವಿಸುತ್ತೀನಿ ಎಂದು ರಕ್ಷಕ್ ಹೇಳಿದ್ದಾರೆ.

ಸುದೀಪ್ ಅಣ್ಣ ನನ್ನ ತಂದೆ ಹೆಸರು ಬಳಸಿದ್ದು ಬೇಸರ ಆಗಿದೆ. ಸುದೀಪ್ ಅಣ್ಣ ಏನೇ ಹೇಳಿದರೂ ವೀಕೆಂಡ್‌ನಲ್ಲಿ ನಾವು ಕೇಳಬೇಕು. ಗೂಬೆ ಅನ್ನೋ ಪದಕ್ಕೆ ನನ್ನ ಅಪ್ಪನನ್ನು ರೋಡಿಗೆ ನಿಲಿಸಿದರು. ಸುದೀಪ್ ಅಣ್ಣ ಮೇಲೆ ಅಷ್ಟೇ ಪ್ರೀತಿ ಇದೆ, ಇದುವರೆಗೂ ಅವರು ಏನೇ ಹೇಳಿದರೂ ಕೇಳುತ್ತೀನಿ. ತುಂಬಾ ಕೆಟ್ಟ ಪದಗಳನ್ನು ಬಳಸಿದ್ದಾರೆ ಅದನ್ನು ಪ್ರಶ್ನೆ ಮಾಡಿದೇ ಗೂಬೆ ಅನ್ನೋ ಪದವನ್ನು ಇಷ್ಟು ದೊಡ್ಡದು ಮಾಡಿದ್ದು ಬೇಸರ ಆಗಿದೆ ಎಂದಿದ್ದಾರೆ.