ನ್ಯೂಸ್

ರಕ್ಷಾ ಬಂಧನ: ರಾಖಿಯಲ್ಲಿನ ಮೂರುಗಂಟುಗಳ ಸಂಕೇತ ಏನು?ಅವುಗಳ ಮಹತ್ವ ತಿಳಿದುಕೊಳ್ಳಿ…

Webdesk - Narayanaswamy

ಬೆಂಗಳೂರು: ಹಿಂದೂ ಧರ್ಮದಲ್ಲಿ ರಕ್ಷಾಬಂಧನವನ್ನು ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ. ಈ ಹಬ್ಬವು ಸಹೋದರತ್ವದ ಬಲವಾದ ಸಂಬಂಧವನ್ನು ಸಂಕೇತಿಸುತ್ತದೆ. ಹಬ್ಬದ ದಿನವಾದ ಆ.19(ಸೋಮವಾರ)ಈ ಮಂಗಳಕರ ದಿನದಂದು, ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿ ಕಟ್ಟುತ್ತಾರೆ. ಇದಕ್ಕೆ ಪ್ರತಿಯಾಗಿ ಸಹೋದರರು ತಮ್ಮ ಸಹೋದರಿಯನ್ನು ರಕ್ಷಿಸುವ ಪ್ರತಿಜ್ಞೆಯನ್ನು ಮಾಡುತ್ತಾರೆ.

ರಕ್ಷಾ ಬಂಧನ ಸಂದರ್ಭ ರಾಖಿಯಲ್ಲಿ ಮೂರು ಗಂಟುಗಳನ್ನು ಕಟ್ಟುವುದು, ಇದರ ಹಿಂದಿನ ಕಾರಣ ತುಂಬಾ ವಿಶೇಷವಾಗಿದೆ. ಮೂರು ಗಂಟುಗಳು ಈ ಮೂರು ವಿಷಯಗಳನ್ನು ಸಂಕೇತಿಸುತ್ತವೆ.

ಸಹೋದರನಿಗೆ ಸಹೋದರಿ ಕಟ್ಟುವ ರಾಖಿಯಲ್ಲಿ ಯಾವಾಗಲೂ 3 ಗಂಟುಗಳನ್ನು ಕಟ್ಟುವುದು ರೂಢಿ. ಇದರ ಹಿಂದಿನ ಕಾರಣ ತುಂಬಾ ವಿಶೇಷ. ಈ ಮೂರು ಗಂಟುಗಳು ತ್ರಿಮೂರ್ತಿಗಳಿಗೆ ಅಂದರೆ ಬ್ರಹ್ಮ, ವಿಷ್ಣು ಮತ್ತು ಮಹೇಶರಿಗೆ ನೇರವಾಗಿ ಸಂಬಂಧಿಸಿವೆ ಎಂದು ನಂಬಲಾಗಿದೆ. ಇದು ಸಂತೋಷ ಮತ್ತು ಅದೃಷ್ಟವನ್ನು ಸಹ ಪ್ರತಿನಿಧಿಸುತ್ತದೆ.

ಮೊದಲ ಗಂಟು ಸಹೋದರನ ದೀರ್ಘಾಯುಷ್ಯಕ್ಕಾಗಿ, ಎರಡನೇ ಗಂಟು ಸಹೋದರಿಯ ದೀರ್ಘಾಯುಷ್ಯಕ್ಕಾಗಿ ಮತ್ತು ಮೂರನೇ ಗಂಟು ಸಹೋದರ-ಸಹೋದರಿ ಸಂಬಂಧವನ್ನು ಗಟ್ಟಿಗೊಳಿಸಲು ಮತ್ತು ಸಿಹಿಗೊಳಿಸಲು ಎಂದು ನಂಬಲಾಗುತ್ತದೆ.