ನ್ಯೂಸ್

ರಕ್ಷಾ ಬಂಧನ ವಿಶೇಷ: 29 ವರ್ಷಗಳ ಬಳಿಕ ಅಪರೂಪದ ಯೋಗ - ಈ ರಾಶಿಯವರಿಗೆ ಶುಭ.. ಕೆಲವರಿಗೆ ಎಚ್ಚರಿಕೆ! | Raksha Bandhan

Raksha Bandhan:  ರಕ್ಷಾ ಬಂಧನ ಎಂದರೆ ಕೇವಲ ರಾಖಿ ಕಟ್ಟುವುದಲ್ಲ. ಇದು ಸಹೋದರ ಸಹೋದರಿಯರ ಪ್ರೀತಿಯ ಹಬ್ಬ. ಈ ವರ್ಷ ಆಗಸ್ಟ್ 9 ರಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ರಕ್ಷಾ ಬಂಧನವು ಬಹಳ ವಿಶೇಷವಾಗಿರುತ್ತದೆ ಏಕೆ ಗೊತ್ತಾ? ಈ ರಕ್ಷಾ ಬಂಧನದಂದು 29 ವರ್ಷಗಳ ಕಾಲ ಅಪರೂಪದ ಯೋಗವು ರೂಪುಗೊಳ್ಳುತ್ತಿದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಕಂಡುಬರುತ್ತದೆ, ಆದರೆ, ಅಪರೂಪ ಯೋಗದ ವಿಶೇಷ ಪರಿಣಾಮವು ಈ ಎರಡು ರಾಶಿಯವರ ಮೇಲೆ ಕಂಡುಬರುತ್ತದೆ.

ಇದನ್ನೂ ಓದಿ: https://www.vijayavani.net/womens-bodies-have-different-needs

ರಕ್ಷಾ ಬಂಧನದ ದಿನದಂದು ಶನಿಯು ಮೀನ ರಾಶಿಯಲ್ಲಿ ಮತ್ತು ಮಂಗಳ ಕನ್ಯಾ ರಾಶಿಯಲ್ಲಿ ಬರುವುದರಿಂದ ಸಂಸಪ್ತಕ ಯೋಗವು ರೂಪುಗೊಳ್ಳುತ್ತದೆ. ಇದರೊಂದಿಗೆ ಭದ್ರಕಳ ಮತ್ತು ಪಂಚಕನ ನೆರಳು ಕಾಣಿಸುವುದಿಲ್ಲ. ಈ ಸಂಯೋಗವು ಹಲವು ವರ್ಷಗಳ ನಂತರ ಸಂಭವಿಸುತ್ತಿದೆ,ಆದರಿಂದ ಈ ಅವಧಿಯಲ್ಲಿ ಎರಡು ರಾಶಿಯವರಿಗೆ ಜನರಿಗೆ ಶುಭವಾಗಲಿದೆ.

ಅದೃಷ್ಟ ರಾಶಿಚಕ್ರ ಚಿಹ್ನೆಗಳು ಯಾವುವು?

* ವೃಶ್ಚಿಕ

ಈ ರಾಶಿಯವರಿಗೆ ಈ ಗ್ರಹ ಸ್ಥಾನವು ತುಂಬಾ ಶುಭವಾಗಲಿದೆ. ಈ ಸಮಯದಲ್ಲಿ ಕುಟುಂಬದಲ್ಲಿ ನಗು ಮತ್ತು ಸಂತೋಷದ ವಾತಾವರಣವಿರುತ್ತದೆ. ಮನೆಯಲ್ಲಿ ಶುಭ ಕಾರ್ಯಕ್ರಮಗಳು ಏರ್ಪಡುತ್ತವೆ. ಸಂಪತ್ತು ಮತ್ತು ಧಾನ್ಯಗಳ ವಿಷಯದಲ್ಲಿ ಪ್ರಯೋಜನಗಳು ಕಂಡುಬರುತ್ತವೆ. ಎಲ್ಲೋ ಸಿಲುಕಿಕೊಂಡಿರುವ ಹಣ ವಾಪಾಸ್ಸಾಗುತ್ತದೆ. ಹೂಡಿಕೆ ಇತ್ಯಾದಿಗಳಿಂದ ಉತ್ತಮ ಲಾಭಗಳು ದೊರೆಯುತ್ತವೆ.

* ಮೀನ

ಈ ರಾಶಿಯವರು ವೃತ್ತಿ ಜೀವನದಲ್ಲಿ ದೀರ್ಘ ಪ್ರಯಾಣ ಬೆಳಸುತ್ತಾರೆ. ಈ ಪ್ರಯಾಣದಿಂದ ಹೆಚ್ಚಿನ ಲಾಭವಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳೊಂದಿಗೆ ತೇರ್ಗಡೆ ಹೊಂದುತ್ತಾರೆ. ಸರ್ಕಾರಿ ಉದ್ಯೋಗಗಳಿಗೆ ಪ್ರಯತ್ನಿಸುತ್ತಿರುವವರು ಈ ಸಮಯದಲ್ಲಿ ಯಶಸ್ಸನ್ನು ಕಾಣಲಿದ್ದಾರೆ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ.

ಈ ಮೂರು ರಾಶಿಯವರು ಜಾಗರೂಕರಾಗಿರಿ!

ಶನಿ ಮತ್ತು ಮಂಗಳ ಗ್ರಹದ ಕಾರಣದಿಂದಾಗಿ ಸಂಸಪ್ತಕ ಯೋಗವು ರೂಪುಗೊಳ್ಳುವುದರಿಂದ, ಮೇಷ, ಮಿಥುನ ಮತ್ತು ಕರ್ಕಾಟಕ ರಾಶಿಯ ವ್ಯಕ್ತಿಗಳು ಆದಷ್ಟು ಜಾಗರೂಕರಾಗಿರಬೇಕು. ಈ ರಾಶಿಯರಿಗೆ ಈ ಸಮಯವು ಉತ್ತಮವಾಗಿರುವುದಿಲ್ಲ. ಈ ಮೂರು ರಾಶಿಯವರು ಕ್ರಮೇಣವಾಗಿ ವೃತ್ತಿ, ಆರ್ಥಿಕ ಮತ್ತು ಆರೋಗ್ಯ ಸಂಬಂಧಿತ ವಿಷಯಗಳಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. (ಏಜೆನ್ಸೀಸ್​)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.