ನ್ಯೂಸ್

25ರಂದು ರಾಜ್ಯೋತ್ಸವ ಕವಿಗೋಷ್ಠಿ

ಕೆ.ಆರ್.ನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನ.25ರಂದು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಏರ್ಪಡಿಸಲಾಗಿದ್ದು, ಆಸಕ್ತ ಕವಿಗಳು ಭಾಗವಹಿಸಬಹುದು. ಆಯ್ದ ಕವನಗಳನ್ನು ವಾಚಿಸುವ ಅವಕಾಶ ನೀಡಲಾಗುವುದು. ಕವನಗಳನ್ನು ನ.18ರೊಳಗೆ ಕಸಾಪ ಅಧ್ಯಕ್ಷರು ಅಥವಾ ಉಪಾಧ್ಯಕ್ಷರಿಗೆ ಕಳುಹಿಸಿಕೊಡುವಂತೆ ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.9986099499, 9900501695 ಸಂಪರ್ಕಿಸುವುದು.