ಹೊಸನಗರ: ತಾಲೂಕಿನ ನಗರ ಚಿಕ್ಕಪೇಟೆ ಗೆಳೆಯರ ಬಳಗದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಚಿಕ್ಕಪೇಟೆ ವೃತ್ತದಲ್ಲಿ ಗ್ರಾಮದ ಹಿರಿಯರಾದ ವೆಂಕಪ್ಪ ಪೂಜಾರಿ, ಹಾಜಿ ಸಾಬ್, ಫಿಲಿಪ್ ರೋಡ್ರಿಗಸ್ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಗೆಳೆಯರ ಬಳಗದಿಂದ ಹಿರಿಯ ನಾಗರಿಕ ಕುಮಾರ್ ಭಟ್, ಆಟೋ ನಾಗರಾಜ್, ನಿವೃತ್ತ ಯೋಧ ರತ್ನಾಕರ ಗೌಡ, ಸಾಹಿತಿ ಎಡ್ವರ್ಡ್ ಡಿಸೋಜ, ವಕೀಲೆ ಎಚ್.ಎಲ್.ಕಾವ್ಯಾ, ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸುಷ್ಮಿತಾ, ಶರೀಫ್ ಮಹಮ್ಮದ್, ಕರಾಟೆ ಪಟು ಸುಧನ್ವ ಜೆ. ಗೌಡ, ಯೋಗಪಟು ಪ್ರತೀಕ್, ರವಿ ಬಿದನೂರು ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗಾಯನ ಹಾಗೂ ನೃತ್ಯಸ್ಪರ್ಧೆ ಏರ್ಪಡಿಸಿ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಯಿತು. ಮುಖಂಡರಾದ ನಿತಿನ್ ನಗರ, ಮಂಜುನಾಥ ಶೆಟ್ಟಿ, ಮನುಕುಮಾರ್, ಆಟೋ ಪ್ರಶಾಂತ್, ಸಂತೋಷಕುಮಾರ್, ಮಧುಕರ ಶೆಟ್ಟಿ, ಪೂರ್ಣೇಶ ಶೆಟ್ಟಿ, ರವಿಕಾಂತ ಜೋಗಿ, ಸುಧಾಕರ ಮಳಲಿ, ಅಸ್ಲಂ ಬಾಷಾ, ಅಶೋಕ ಜೋಗಿ, ಅಕ್ಷಯಕುಮಾರ್, ರವೀಶ್, ಮಧು, ಸತೀಶ್, ನೂತನ್, ನವೀನ್, ದಿನೇಶ್ ಇದ್ದರು.