ನ್ಯೂಸ್

ಗೋವಾ ಬೀದಿಯಲ್ಲಿ ಮತ್ತೇರಿಸಿಕೊಂಡು ನಟನ ರಂಪಾಟ; Jailer ಖ್ಯಾತಿಯ Vinayakan ವಿಡಿಯೋ ವೈರಲ್​

ಪಣಜಿ: 2023ರಲ್ಲಿ ಬಿಡುಗಡೆಯಾಗಿ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ್ದ ಸೂಪರ್​ಸ್ಟಾರ್​ ರಜಿನಿಕಾಂತ್​ ನಟನೆಯ ಜೈಲರ್​ (Jailer) ಚಿತ್ರವು ಆ ಬಳಿಕ ಒಟಿಟಿಯಲ್ಲೂ ದಾಖಲೆ ಬರೆದಿತ್ತು. ಜೈಲರ್​ ಚಿತ್ರದಲ್ಲಿ ವಿಲನ್​ ಆಗಿ ನಟಿಸಿದ್ದ ಮಲಯಾಳಿ ನಟ ವಿನಾಯಕನ್ (Vinayakan)​ ಆಗಿಂದಾಗೆ ತಮ್ಮ ಮಿತಿಮೀರಿದ ವರ್ತನೆಯಿಂದಲೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಮಲಯಾಲಂ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ವಿನಾಯಕನ್​ (Vinayakan) ಇದೀಗ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿ ಸುದ್ದಿಯಾಗಿದ್ದಾರೆ.

ರಜಿನಿಕಾಂತ್​, ದುಲ್ಕರ್ ಸಲ್ಮಾನ್, ವಿಶಾಲ್, ಮಮ್ಮುಟಿ, ಮೋಹನ್​ಲಾಲ್ ಸೇರಿದಂತೆ ಖ್ಯಾತನಾಮರೊಂದಿಗೆ ನಟಿಸಿರುವ ವಿನಾಯಕನ್​ (Vinayakan) ತನ್ನ ದುವರ್ತನೆಯಿಂದಲೇ ಆಗಿಂದಾಗೆ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಈ ವಿಚಾರವಾಗಿ ಬಂಧನಕ್ಕೊಳಗಾಗಿ ಹಲವು ಬಾರಿ ನಟ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದೀಗ ಗೋವಾದ ಬೀದಿಯೊಂದರಲ್ಲಿ ನಟ ಕುಡಿದು ಗಲಾಟೆ ಮಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ರಸ್ತ ಬದಿಯ ಹೋಟೆಲ್​ ಒಂದರ ಮುಂಭಾಗ ನಿಂತಿರುವ ವಿನಾಯಕನ್ (Vinayakan)​ ಕುಡಿದ ಮತ್ತಿನಲ್ಲಿ ಅಲ್ಲಿನ ಕೆಲಸದವರ ಮೇಲೆ ಕೂಗಾಡುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬರು ಅವರನ್ನು ತಡೆಯುತ್ತಾರೆ. ಇಷ್ಟಕ್ಕೆ ಸುಮ್ಮನಾಗದ ವಿನಾಯಕನ್​ ಹೋಟೆಲ್​ನವರ ಜೊತೆ ವಾಗ್ವಾದ ನಡೆಸುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಕಳೆದ ತಿಂಗಳು ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ವಿನಾಯಕನ್​ ಸಿಐಎಸ್​ಎಫ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡುವ ಮೂಲಕ ಬಂಧನಕ್ಕೊಳಗಾಗಿದ್ದರು. ಈ ವಿಚಾರ ಸಖತ್​ ವೈರಲ್​ ಆಗಿತ್ತು. ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪೊಲೀಸರು ವಿನಾಯಕನ್​ನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ತಮ್ಮ ದುವರ್ತನೆಯಿಂದಲೇ ಹೆಚ್ಚು ಖ್ಯಾತಿ ಪಡೆದಿರುವ ವಿನಾಯಕನ್​ (Vinayakan) ಸಿನಿಮಾಗಳಲ್ಲಿ ಅವಕಾಶ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.