ನ್ಯೂಸ್

'ಜೈಲರ್ 2' ಬಿಡುಗಡೆ ದಿನಾಂಕ ರಿವೀಲ್​ ಮಾಡಿದ 'ರಜನಿಕಾಂತ್'| Jailer-2

Jailer-2; ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಜೈಲರ್ 2' ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. 2023 ರಲ್ಲಿ ಬಿಡುಗಡೆಯಾದ 'ಜೈಲರ್' ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದರೂ, ವಿಶ್ವಾದ್ಯಂತ ಸುಮಾರು 600 ಕೋಟಿ ರೂ.ಗಳನ್ನು ಗಳಿಸುವ ಮೂಲಕ ದಾಖಲೆ ನಿರ್ಮಿಸಿತು. ಈ ಯಶಸ್ಸಿನ ಬಳಿಕ ಅಭಿಮಾನಿಗಳು ಜೈಲರ್​ನ ಎರಡನೇ ಭಾಗಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಇನ್ನೂ ಕರ್ನಾಟಕ ಸೇರಿದಂತೆ ಅನೇಕ ಸ್ಥಳಗಳಲ್ಲಿ ಈ 'ಜೈಲರ್ 2' ಚಿತ್ರೀಕರಣ ನಡೆಯುತ್ತಿದೆ. ಕೇರಳದ ಪಾಲಕ್ಕಾಡ್ ಬಳಿ ನಡೆದ ಶೂಟಿಂಗ್‌ನಲ್ಲಿ ರಜನಿಕಾಂತ್ ವಿಶೇಷವಾಗಿ ಕಾಣಿಕೊಂಡ ಲುಕ್​ ಎಲ್ಲೆಡೆ ವೈರಲ್​ ಆಗಿತ್ತು. ವಾಹನದಲ್ಲಿ ನಿಂತಿದ್ದ ರಜನಿಕಾಂತ್, ಕಾರಿನ ಸನ್‌ರೂಫ್ ಮೂಲಕ ಅಭಿಮಾನಿಗಳಿಗೆ ಕೈ ಬೀಸಿ ಚಪ್ಪಾಳೆ ತಟ್ಟಿದ್ದರು. ಕೇರಳ ಚಿತ್ರೀಕರಣ ಮುಗಿಸಿ ರಜನಿಕಾಂತ್ ಚೆನ್ನೈಗೆ ಮರಳಿದ್ದು, ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಜನಿಕಾಂತ್ 'ಜೈಲರ್ 2' ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್​ನ್ಯೂಸ್​ ನೀಡಿದ್ದಾರೆ. ಮುಂದಿನ ಜೂನ್ 12, 2026 ರಂದು ಸಿನಿಮಾ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ರಜನಿಕಾಂತ್​ ಹೇಳಿದ್ದಾರೆ.

(ಏಜೆನ್ಸೀಸ್)

ನೆಲ್ಸನ್ ನಿರ್ದೇಶನದ ರಜನಿಕಾಂತ್ ನಟಿನೆಯ 'ಜೈಲರ್' 2023 ರಲ್ಲಿ ಬಿಡುಗಡೆಯಾದಾಗ ವಿವಿಧ ಬಾಕ್ಸ್ ಆಫೀಸ್​ನಲ್ಲಿ ದಾಖಲೆಯ ಗಳಿಕೆ ಕಂಡಿತ್ತು. '2.0' ಬಳಿಕ 'ಜೈಲರ್' ಸಿನಿಮಾ ರಜನಿ ಅವರ ವೃತ್ತಿಜೀವನದ ಎರಡನೇ ಅತಿದೊಡ್ಡ ಯಶಸ್ಸಾಗಿತ್ತು. ಈ ಮುಂದುವರಿದ ಭಾಗದಲ್ಲಿ ಎಸ್‌ಜೆ ಸೂರ್ಯ, ನಂದಮೂರಿ ಬಾಲಕೃಷ್ಣ ಮತ್ತು ಇತರರು ಸೇರಿದಂತೆ ಹೊಸ ಮುಖಗಳು ಕಾಣಿಸಿಕೊಳ್ಳಲಿವೆ ಎಂಬ ವರದಿಯಾಗಿದೆ.