ನ್ಯೂಸ್

ಸಾಮಾನ್ಯರಂತೆ ರಸ್ತೆಯಲ್ಲಿ ಊಟ ಸವಿದ ಸೂಪರ್​ಸ್ಟಾರ್​ ರಜನಿ​: ತಲೈವಾ ಫೋಟೋ ಭಾರೀ ವೈರಲ್​ | Rajinikanth

Rajinikanth: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ರಜನಿಕಾಂತ್​ ತಮ್ಮ ಬ್ಯೂಸಿ ಶೆಡ್ಯೂಲ್​ ನಡುವೆ ಶೂಟಿಂಗ್​ಗೆ ಕೊಂಚ ಬ್ರೇಕ್ ನೀಡಿ ಹಿಮಾಲಯಕ್ಕೆ ಪ್ರಯಾಣ ಬೆಳಸಿದ್ದಾರೆ. ಈ ಮಧ್ಯೆ ದಾರಿಯಲ್ಲಿ ಸಾಮಾನ್ಯರಂತೆ ರಸ್ತೆಯಲ್ಲಿ ಊಟ ಮಾಡಿದ್ದು, ಇದೀಗ ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್​​ ಆಗಿವೆ.

ರಜನಿಕಾಂತ್ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮಿ ದಯಾನಂದರಿಗೆ ಗೌರವ ಸಲ್ಲಿಸಿದರು. ಅಲ್ಲಿ ಅವರು ಇದ್ದ ಸಮಯದಲ್ಲಿ, ತಲೈವಾ ಗಂಗಾ ನದಿಯ ದಡದಲ್ಲಿ ಧ್ಯಾನ ಮಾಡಿದ್ದರು ಮತ್ತು ಗಂಗಾ ಆರತಿಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಅವರ ಆಧ್ಯಾತ್ಮಿಕ ಪ್ರವಾಸದ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಒಂದು ಫೋಟೋದಲ್ಲಿ ರಜನಿಕಾಂತ್ ಬಿಳಿ ಬಟ್ಟೆಗಳನ್ನು ಧರಿಸಿ, ರಸ್ತೆಬದಿಯ ಕಲ್ಲಿನ(ತಡೆಗೋಡೆ) ಮೇಲ್ಮೈಯಲ್ಲಿ ಇರಿಸಲಾದ ಎಲೆ ತಟ್ಟೆಯಲ್ಲಿ ಬಡಿಸಿದ ಆಹಾರವನ್ನು ಊಟ ಮಾಡುತ್ತಿದ್ದಾರೆ. ಅಲ್ಲದೆ, ಬೆಟ್ಟದ ಹಿನ್ನೆಲೆಯಲ್ಲಿ ನಿಲ್ಲಿಸಿದ್ದ ಕಾರು ಕಂಡುಬಂದಿದೆ.

ಇನ್ನೊಂದು ಫೋಟೋದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್​, ಆಶ್ರಮವೊಂದರಲ್ಲಿ ತಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ. ನಂತರ ರಜನಿಕಾಂತ್ ಒಬ್ಬ ಪುರೋಹಿತರ ಪಕ್ಕದಲ್ಲಿ ನಿಂತು ಗೌರವ ಸಲ್ಲಿಸುತ್ತಿರುವ ಚಿತ್ರ ಕೂಡ ಇದೆ.

ಇತ್ತೀಚೆಗೆ, ನಟ-ರಾಜಕಾರಣಿ ವಿಜಯ್ ಆಯೋಜಿಸಿದ್ದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರ್ಯಾಲಿಯಲ್ಲಿ ಸಂಭವಿಸಿದ ದುರದೃಷ್ಟಕರ ಕಾಲ್ತುಳಿತ ಘಟನೆಯಲ್ಲಿ ಬಲಿಯಾದವರಿಗೆ ರಜನಿಕಾಂತ್ ಸಂತಾಪ ಸೂಚಿಸಿದ್ದರು.(ಏಜೆನ್ಸೀಸ್​)