ರಾಣೆಬೆನ್ನೂರ: ಗ್ರಾಹಕರು ತಮಗೆ ಆದ ಅನ್ಯಾಯ ಎದುರಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಅದಕ್ಕಾಗಿ ಕಂಜ್ಯೂಮರ್ ಪ್ರೋಟೆಕ್ಟ ಆಕ್ಟ್‌ಅನ್ನು ಬಳಸಿಕೊಳ್ಳಬೇಕು ಎಂದು ವಕೀಲ ಹಾಲೇಶಪ್ಪ ಗೌಡಶಿವಣ್ಣನವರ ಹೇಳಿದರು.
ಸ್ಥಳೀಯ ಕೆ.ಎಲ್.ಇ. ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಗ್ರಾಹಕರ ಜಾಗೃತಿ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರ ನ್ಯಾಯಾಲಯದಲ್ಲಿ ಜಿಲ್ಲಾ ನ್ಯಾಯಾಧೀಶರ ಪದವಿ ಪಡೆದ ವ್ಯಕ್ತಿಯು ಜಿಲ್ಲಾ ವೇದಿಕೆಯ ಅಧ್ಯಕ್ಷರಾಗಿರುತ್ತಾರೆ. ಗ್ರಾಹಕರು ತಮ್ಮ ಎಲ್ಲ ಸಮಸ್ಯೆಗಳನ್ನು ಗ್ರಾಹಕರ ವೇದಿಕೆಯ ಮೂಲಕ ಪರಿಹರಿಸಿಕೊಳ್ಳಬೇಕಾದರೆ, ಅದಕ್ಕೆ ಬೇಕಾದ ಎಲ್ಲ ಬಿಲ್ಲುಗಳನ್ನು ಇಟ್ಟುಕೊಳ್ಳಬೇಕು. ಅಂದಾಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಪ್ರೀತಿ ವಿ.ಆರ್., ಮೇಘಾ ಡಿ., ಶ್ರೇಯಾ ಬಿ., ರಕ್ಷಾ ಜಿ., ಸಾಯಿಲತಾ ಮಡಿವಾಳರ, ವೀರಣ್ಣ ಸಿ.ಕೆ., ವಿದ್ಯಾಶ್ರೀ ಡಿ. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.