ನ್ಯೂಸ್

ವಿದ್ಯಾರ್ಥಿನಿಯರು ಉನ್ನತ ಹುದ್ದೆ ಪಡೆದು ದೇಶ ಬೆಳೆಸಲು ಶ್ರಮಿಸಿ; ಎಂ.ಎನ್. ಸೂರಣಗಿ

Haveri - Kariyappa Aralikatti

ರಾಣೆಬೆನ್ನೂರ: ದೇಶದ ಆರ್ಥಿಕ ವ್ಯವಸ್ಥೆ ಬೆಳೆಸುವುದರ ಜತೆಗೆ ಉಳಿಸುವುದು ಮುಖ್ಯವಾಗಿದೆ. ವಿದ್ಯಾರ್ಥಿನಿಯರು ನಿರಂತರವಾಗಿ ಅಧ್ಯಯನ ಮಾಡುವ ಮೂಲಕ ಉನ್ನತ ಹುದ್ದೆ ಪಡೆದು ದೇಶದ ಆರ್ಥಿಕ ವ್ಯವಸ್ಥೆ ಬೆಳೆಸಲು ಶ್ರಮಿಸಬೇಕು ಎಂದು ಭೂಗೋಳಶಾಸ್ತ್ರ ಮುಖ್ಯಸ್ಥ ಎಂ.ಎನ್. ಸೂರಣಗಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ಗುರುವಾರ ಏರ್ಪಡಿಸಿದ್ದ ನನ್ನ ಭಾರತ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷೆ ಸಾಯಿಲತಾ ಮಡಿವಾಳರ, ವೀರೇಶ ಕುರಹಟ್ಟಿ, ಡಾ. ಕವಿತಾ ಗಡ್ಡದಗೂಳಿ, ರತ್ನವ್ವ ಹಾದಿಮನಿ, ವಾಣಿ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.