ನ್ಯೂಸ್

ಮಹಿಳೆಯರು ಸದೃಢ ಸಮಾಜಕ್ಕೆ ಮಾರ್ಗದಶಿರ್ಯಾಗಲಿ; ರುದ್ರಪ್ಪ ಲಮಾಣಿ

ರಾಣೆಬೆನ್ನೂರ: ಮಹಿಳೆಯರು ಸ್ವ ಉದ್ಯೋಗಗಳ ಮೂಲಕ ಆಥಿರ್ಕವಾಗಿ ಸದೃಢವಾಗಿ ಸಮಾಜಕ್ಕೆ ಮಾರ್ಗದಶಿರ್ಗಳಾಗಬೇಕಿದೆ ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಕೆ.ಎಲ್​.ಇ. ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿದ್ಯಾಲಯದಲ್ಲಿ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಬಹಳಷ್ಟು ಸೌಲಭ್ಯ ಕಲ್ಪಿಸುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಚಿತ್ತ ಹರಿಸಬೇಕಿದೆ. ಮಹಿಳೆಯರು ಇಂದು ತಮ್ಮನ್ನು ಎಲ್ಲ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದು ಸಾಧನೆಯ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಮಹಿಳೆಯರಿಗೆ ಆತ್ಮಸ್ಥೆ$ರ್ಯ ತುಂಬಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್​ಇ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್​ ವಿ.ಪಿ. ಲಿಂಗನಗೌಡ್ರ ಮಾತನಾಡಿ, ಸಮಾಜದಿಂದ ಶೋಷಣೆಗೆ ಓಳಗಾದ ಮಹಿಳೆಯರ ಜೀವನ ಸುಧಾರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆ ರೂಪಿಸಿ ಆಥಿರ್ಕ ಪ್ರೋತ್ಸಾಹ ನೀಡುತ್ತಿದೆ. ಅಂತಹ ಸೌಲಭ್ಯಗಳನ್ನು ವಿದ್ಯಾಥಿರ್ಗಳು ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯರಾದ ನಾರಾಯಣ ನಾಯಕ, ಉಪನ್ಯಾಸಕರಾದ ಚನಬಸಪ್ಪ ಮಾಳಿ, ಮಂಜಪ್ಪ ಸಿ.ಎಸ್​., ಗಣೇಶ ಅಂಗಡಿ, ಎಂ.ಕೆ. ಮೆಹಬೂಬ ಖಾನ್​ ಖಿಲ್ಲೇದಾರ, ಎಂ.ಎಂ. ಮೈದೂರ, ಡಾ. ಕವಿತಾ ಗಡ್ಡದಗೂ, ನಾಗರಾಜ ಗವಿಯಪ್ಪನವರ, ವಿದ್ಯಾಶ್ರೀ ದಾಮೋದರ ಮತ್ತಿತರರು ಉಪಸ್ಥಿತರಿದ್ದರು.