ಜೈಪುರ: ರಾಜಸ್ಥಾನದ ಫಲೋಡಿ ಜಿಲ್ಲೆಯಲ್ಲಿ ಪತ್ನಿಯನ್ನು ಪತಿಯೇ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. 33 ವರ್ಷದ ಅನಾಮಿಕಾ ಬಿಷ್ಣೋಯ್ ಮೃತ ಮಹಿಳೆ.
ಇದನ್ನೂ ಓದಿ:ಆಂಧ್ರದಲ್ಲಿ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ 5000 ರೂ. ಘೋಷಣೆ: ಕರ್ನಾಟಕದಲ್ಲೂ ಈ ಮೊತ್ತ ಹೆಚ್ಚಸಲಿದೆಯೇ ಕಾಂಗ್ರೆಸ್?
ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅನಾಮಿಕ ಬಿಷ್ಣೋಯ್ ಅಂಗಡಿಗೆ ಬಂದಿದ್ದ ಪತಿ ಹಾಗೂ ಪತ್ನಿ ನಡುವೆ ತೀವ್ರ ಜಗಳ ನಡೆದಿದೆ. ಬಳಿಕ ಸಿಟ್ಟಿನಿಂದ ಪತಿ ಪತ್ನಿಗೆ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಫಲೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೌರ್ ರಸ್ತೆಯಲ್ಲಿರುವ ಸಿಟಿ ಪಾಯಿಂಟ್ ಬಳಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಘಟನೆ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಡಿಎಸ್ಪಿ ರಾಮಕರನ್ ಸಿಂಗ್, ಸಿಐ ಭನ್ವರ್ ಸಿಂಗ್ ಸೇರಿದಂತೆ ಪೊಲೀಸ್ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಮೃತ ಅನಾಮಿಕಾ ಬಿಷ್ಣೋಯಿ ಪತಿ ಮಹಿರಾಮ್ ಬಿಷ್ಣೋಯ್ ಮಧ್ಯಾಹ್ನ 12 ಗಂಟೆಗೆ ಅಂಗಡಿಗೆ ಬಂದಿದ್ದನು ಎಂದು ಫಲೋಡಿ ಜಿಲ್ಲಾ ಹಂಗಾಮಿ ಪೊಲೀಸ್ ವರಿಷ್ಠಾಧಿಕಾರಿ ಸೌರಭ್ ತಿವಾರಿ ತಿಳಿಸಿದ್ದಾರೆ.
ಫಲೋಡಿ ಜಿಲ್ಲಾ ಹಂಗಾಮಿ ಪೊಲೀಸ್ ವರಿಷ್ಠಾಧಿಕಾರಿ ಸೌರಭ್ ತಿವಾರಿ ಮಾತನಾಡಿ, ಅನಾಮಿಕಾ 13 ವರ್ಷಗಳ ಹಿಂದೆ ಬಿಕಾನೇರ್ ನ ನಗರಸರ ನಿವಾಸಿ ಗೋಪಿರಾಮ್ ಅವರ ಪುತ್ರ ಮಹಿರಾಮ್ ಬಿಷ್ಣೋಯ್ ಅವರನ್ನು ವಿವಾಹವಾಗಿದ್ದರು. ಮಹಿಳೆಯ ಪತಿ ಮಹಿರಾಮ್ ಗ್ರಾಮದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದಾನೆ. ಇಬ್ಬರ ನಡುವೆ 2 ವರ್ಷಗಳಿಂದ ಜಗಳ ನಡೆಯುತ್ತಿತ್ತು. ಜೀವನಾಂಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬನಿಗೆ 12 ವರ್ಷ ಮತ್ತು ಇನ್ನೊಬ್ಬನಿಗೆ 10 ವರ್ಷ.
ಎರಡು ವರ್ಷಗಳಿಂದ ಅನಾಮಿಕಾ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಫಲೋಡಿಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಇಂದು ಬೆಳಗ್ಗೆ 11:30ರ ಸುಮಾರಿಗೆ ಮಹಿರಾಮ್ ಅನಾಮಿಕಾ ಮನೆಗೆ ಹೋಗಿದ್ದನು. ಇವತ್ತು ಒಂದೋ ನಿನ್ನ ಅಮ್ಮ ಇರುತ್ತಾಳೆ. ಇಲ್ಲ ನಾನು ಇರುತ್ತೇನೆ ಎಂದು ಮಕ್ಕಳಿಬ್ಬರಿಗೂ ಹೇಳಿ ಹೋಗಿದ್ದನು.