ನ್ಯೂಸ್

ಕನ್ಹಯ್ಯಲಾಲ್​​ ಕುಟುಂಬಸ್ಥರಿಗೆ 51ಲಕ್ಷ ರೂ.ಧನಸಹಾಯ: ಸಿಎಂ ಅಶೋಕ್​ ಗೆಹ್ಲೋಟ್​ ಅವರಿಂದ ಚೆಕ್​ ವಿತರಣೆ

ಉದಯಪುರ: ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆಯಾದ ಟೈಲರ್​ ಕನ್ಹಯ್ಯ ಲಾಲ್​​ ಅವರ ಮನೆಗೆ ತೆರಳಿದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.

ಉದಯಪುರದಲ್ಲಿರುವ ಕನ್ಹಯ್ಯಲಾಲ್​ ಮನೆಗೆ ಗುರುವಾರ ಭೇಟಿ ನೀಡಿದ ಸಿಎಂ ಗೆಹ್ಲೋಟ್​, ಕುಟುಂಬಸ್ಥರಿಗೆ 51 ಲಕ್ಷ ರೂ.ಚೆಕ್​ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್​, ಈ ಪ್ರಕರಣವನ್ನು ಎನ್​ಐಎ ತನಿಖೆಗೊಳಪಡಿಸಬೇಕೆಂದು ಕೇಂದ್ರ ಗೃಹ ಸಚಿವರಲ್ಲಿ ಮನವಿ ಮಾಡಲಾಗುವುದು, ಹಂತಕರಿಗೆ ಕಠಿಣ ಶಿಕ್ಷೆಯಾಗುವುದು ಖಚಿತ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಗೆಹ್ಲೋಟ್ ಮಾತ್ರವಲ್ಲದೇ ಸ್ಥಳೀಯ ಶಾಸಕರು, ರಾಜಕೀಯ ಮುಖಂಡರು ಕನ್ಹಯ್ಯ ಲಾಲ್​ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿತ್ತಿದ್ದು, ಕೆಲವು ಸಂಘ-ಸಂಸ್ಥೆಗಳಿಂದಲೂ ಪರಿಹಾರ ಧನ ನೀಡಲಾಗಿದೆ. (ಏಜೆನ್ಸೀಸ್​)