ನವದೆಹಲಿ: ರಾಜಸ್ಥಾನದಲ್ಲಿ 200 ವಿಧಾನಸಭಾ ಸ್ಥಾನಗಳಿವೆ. ಯಾವುದೇ ಪಕ್ಷಕ್ಕೆ ಸರ್ಕಾರ ರಚಿಸಲು 101 ಸ್ಥಾನಗಳ ಅಗತ್ಯವಿದೆ. ಬಿಜೆಪಿ 117 ಸ್ಥಾನ ಪಡೆದು ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 67 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತರೆ 15 ಸ್ಥಾನವನ್ನು ಪಡೆದಿದೆ. ಪ್ರಸ್ತುತ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯುತ್ತಿತ್ತು. ಆದರೆ ಬಿಜೆಪಿ ಮ್ಯಾಜಿಕ್ ನಂಬರ್ ದಾಟುವ ಮೂಲಕವಾಗಿ ಅಧಿಕಾರದ ಚುಕ್ಕಾಣೆ ಹಿಡಿಯುವುದು ಖಚಿತವಾಗಿದ್ದು, ಕಾಂಗ್ರೆಸ್ಗೆ ಹೀನಾಯ ಸೋಲಾಗಲಿದೆ ಎನ್ನವ ಲೆಕ್ಕಾಚಾರ ಶುರುವಾಗಿದೆ.
ರಾಜಸ್ಥಾನದಲ್ಲಿ ಬಿಜೆಪಿಯಲ್ಲಿ ಯರಾಗುತ್ತಾರೆ ಸಿಎಂ ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು ಬಹಳಷ್ಟು ಜನರ ಹೆಸರು ಕೇಳಿಬರುತ್ತಿದೆ. ಅತಂತ್ರ ವಿಧಾನಸಭೆ ನಿರ್ಮಾಣವಾಗಿ ಬಿಜೆಪಿ ಬಹುಮತಕ್ಕೆ ಕೆಲವೇ ಸ್ಥಾನಗಳ ಕೊರತೆಯಾದರೆ ವಸುಂಧರಾ ಸಿಎಂ ಆಗಬಹುದು ಎನ್ನಲಾಗುತ್ತಿದೆ. ಪೂರ್ಣ ಬಹುಮತ ಸಿಕ್ಕರೆ ಮಹಂತ್ ಬಾಲಕನಾಥ್ ಸಿಎಂ ಆಗಬಹುದು ಎನ್ನಲಾಗುತ್ತಿದೆ.
ಚುನಾವಣೆ ನಡೆದ 5 ರಾಜ್ಯಗಳ ಪೈಕಿ 4 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಮತ ಎಣಿಕೆ ಆರಂಭವಾಗಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಮಾತ್ರ ವಿಧಾನಸಭೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಕೆಲವೇ ಗಂಟೆಗಳಲ್ಲಿ ಯಾವ ರಾಜ್ಯ ಯಾವ ಪಕ್ಷದ ತೆಕ್ಕೆಗೆ ಬೀಳಲಿದೆ ಎಂಬುದು ಸ್ಫಷ್ಟವಾಗಲಿದೆ. ಮಿಜೋರಾಂ ರಾಜ್ಯದಲ್ಲಿ ನಾಳೆ ಮತಗಳ ಎಣಿಕೆಯಾಗಲಿದೆ.