ನ್ಯೂಸ್

ರಾಜರಾಜೇಶ್ವರಿ ಇಂಜನಿಯರಿಂಗ್ ಕಾಲೇಜು 15ನೇ ಘಟಿಕೋತ್ಸವ

Bengaluru - Political - Shivananda Tagadur

ಬೆಂಗಳೂರು:
ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸಬಲರನ್ನಾಗಿಸಿ, ಸ್ವಯಂ ಉದ್ಯೋಗಿಗಳನ್ನಾಗಿಸುವುದೇ ಶಿಕ್ಷಣ ಕ್ರಾಂತಿಯ ಮುಖ್ಯ ದ್ಯೇಯ ಎಂದು ರಾಜರಾಜೇಶ್ವರಿ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಎ.ಸಿ. ಷಣ್ಮುಗಂ ಹೇಳಿದರು.
ರಾಜರಾಜೇಶ್ವರಿ ಸಮೂಹ ಸಂಸ್ಥೆ ಬೆಂಗಳೂರು ಇದರ ಅಂಗ ಸಂಸ್ಥೆ ರಾಜರಾಜೇಶ್ವರಿ
ಇಂಜನಿಯರಿಂಗ್ ಕಾಲೇಜಿನ 15 ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪದವಿ ಪಡೆದವರನ್ನು ಅಭಿನಂದಿಸಿದ ಅವರು, ವಿದ್ಯಾರ್ಥಿಗಳು ತಾವು ಪಡೆದ ಶಿಕ್ಷಣವನ್ನು ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಹಾಗೂ ಜೀವನದಲ್ಲಿ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು ಎಂದು ಕಿವಿ ಮಾತು ಹೇಳಿದರು.
ಐಐಐಟಿ ನಿರ್ದೇಶಕ ಡಾ. ದೇಬಬೃತ ದಾಸ್ ಅವರು ಮಾತನಾಡಿ, ಇಂದಿನ ದಿನದಲ್ಲಿ ವೇಗವಾಗಿ ಬದಲಾಗುತ್ತಿರುವ ಉದ್ಯೋಗ ವಲಯದಲ್ಲಿ ನಿರಂತರ ಕಲಿಕೆ ಮತ್ತು ಹೊಂದಾಣಿಕೆ ಪ್ರಾಮುಖ್ಯತೆ ಕುರಿತು ವಿವರಿಸಿದರು. ಇಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಅತ್ಯಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 257 ಇಂಜನಿಯರಿಂಗ್ ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ
ಮಾಡಲಾಯಿತು. ರಾಜರಾಜೇಶ್ವರಿ ಗ್ರೂಫ್ ಆಫ್ ಇನ್‌ಸ್ಟಿಟ್ಯೂಶನ್ ನ ರೆಕ್ಟರ್ ಡಾ. ಎ.ಕೆ ಮರಿಯಪ್ಪನ್ ಅವರು ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಈ ವೇಳೆ ಭಾಗವಹಿಸಿದ್ದ ಅತಿಥಿ ಗಣ್ಯರು ಡಾ. ಎ.ಸಿ. ಷಣ್ಮುಗಂ ಅವರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಮೂಲಕ ಮಾಡಿದ ಶಿಕ್ಷಣ ಕ್ರಾಂತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ನಟಿ ಛಾಯಾ ಸಿಂಗ್, ಮೈಂಡ್‌ಟ್ರೀ ಸಂಸ್ಥೆಯ ಇ ಎಸ್.ಜೆ. ನಾಗನಗೌಡ, ರಾಜರಾಜೇಶ್ವರಿ ಗ್ರೂಫ್ ಆಫ್ ಇನ್‌ಸ್ಟಿಟ್ಯೂಶನ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ವಿಜಯಾನಂದ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಎನ್ ಸೀತಾರಾಮ್, ವಿಶೇಷಾಧಿಕಾರಿಗಳಾದ ಪ್ರೋ. ಡಾ. ಜಯಬಾಲನ್, ರಾಜರಾಜೇಶ್ವರಿ ಇಂಜನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಬಾಲಕೃಷ್ಣ ಇತರರು ಇದ್ದರು.