- ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆ ಕಡೆಗೂ ಅನಾವರಣ
- 'ವಾರಣಾಸಿ' ಎಂಬ ಟೈಟಲ್ ಅನ್ನೇ ಫಿಕ್ಸ್ ಮಾಡಿದ ರಾಜಮೌಳಿ
- ಪ್ರಿನ್ಸ್ ಲುಕ್ಗೆ ಫ್ಯಾನ್ಸ್ ಫಿದಾ
ಆಂಧ್ರಪ್ರದೇಶ: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ನಿರ್ದೇಶಕ ಎಸ್.ಎಸ್. ರಾಜಮೌಳಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆ ಕಡೆಗೂ ಅನಾವರಣಗೊಂಡಿದೆ.
ಈ ಹಿಂದೆ ಹರಿದಾಡುತ್ತಿದ್ದ 'ವಾರಣಾಸಿ' ಎಂಬ ಟೈಟಲ್ ಅನ್ನೇ ರಾಜಮೌಳಿ ಫಿಕ್ಸ್ ಮಾಡಿದ್ದಾರೆ. ಇದೇ ಚಿತ್ರದ ಶೀರ್ಷಿಕೆಯಾಗಿದ್ದು, ಇದನ್ನೇ ಅಂತಿಮಗೊಳಿಸಲಾಗಿದೆ ಎಂದಿದ್ದಾರೆ. ಇದರೊಟ್ಟಿಗೆ ಮಹೇಶ್ ಬಾಬು ಅವರ ಪಾತ್ರವನ್ನು ಸಹ ಬಹಿರಂಗಪಡಿಸಲಾಗಿದೆ. ಕುದುರೆ ಏರಿ ಬರುತ್ತಿರುವ 'ರುದ್ರ'ನಾಗಿ ಪ್ರಿನ್ಸ್ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದಾರೆ.
ಇಂದು ಹೈದರಾಬಾದ್ನಲ್ಲಿ ನಡೆದ 'ಗ್ಲೋಬ್ ಟ್ರಾಟರ್' ಕಾರ್ಯಕ್ರಮದಲ್ಲಿ ವಿಶೇಷ ವಿಡಿಯೋ ರಿಲೀಸ್ ಮಾಡುವ ಮೂಲಕ ಮಹೇಶ್ ಬಾಬು ಅವರ ಪಾತ್ರ ಮತ್ತು ಟೈಟಲ್ ಅನ್ನು ರಿವೀಲ್ ಮಾಡಲಾಯಿತು. ನಂದಿಯ ಮೇಲೆ ಕುಳಿತಿರುವ ಮಹೇಶ್ ಬಾಬು ಅವರ ನೋಟ ಅದ್ಭುತವಾಗಿ ಕಂಡುಬಂದಿದೆ. ನಂದಿಯ ವಾಹನದ ಮೇಲೆ ಉಗ್ರ ರೂಪದಲ್ಲಿ ಪ್ರಿನ್ಸ್ ಕಾಣಿಸಿಕೊಂಡಿರುವುದು ನಟನ ಫ್ಯಾನ್ಸ್ಗಳ ಕುತೂಹಲವನ್ನು ಕೆರಳಿಸಿದೆ.
ಮಹೇಶ್ ಅವರ ಫಸ್ಟ್ ಲುಕ್ ಜತೆಗೆ ಗ್ಲಿಂಪ್‌ಗಳನ್ನು ಸಹ ಬಿಡುಗಡೆ ಮಾಡಲಾಯಿತು. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಗ್ಲೋಬ್ ಟ್ರಾಟರ್ ಎಂಬ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿದ್ದ ಚಿತ್ರತಂಡ, ಇದೇ ವೇದಿಕೆಯಲ್ಲಿ ಸಿನಿಮಾದ ರಿಲೀಸ್ ಸಮಯವನ್ನು ಘೋಷಿಸಿತು. 2027ರ ಆರಂಭದಲ್ಲಿ ಚಿತ್ರವನ್ನು ಜಾಗತಿಕವಾಗಿ ಬಿಡುಗಡೆಗೊಳಿಸುವುದಾಗಿ ಚಿತ್ರ ತಯಾರಕರು ಹೇಳಿದರು,(ಏಜೆನ್ಸೀಸ್).