ನ್ಯೂಸ್

ರಾಜಮ್ಮಗೆ ದುನಿಯಾ ವಿಜಿಯಿಂದ ಸನ್ಮಾನ

ಸರಗೂರು: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ರಾಜಮ್ಮ ಅವರಿಗೆ ಚಿತ್ರ ನಟ ದುನಿಯಾ ವಿಜಯ್ ಸನ್ಮಾನಿಸಿ ಗೌರವಿಸಿದರು.

ಇತ್ತಿಚೆಗೆ ಸಿನಿಮಾ ಪ್ರಚಾರಕ್ಕೆ ಬಂದ ಸಂದರ್ಭ ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರಾಜಮ್ಮ ಅವರನ್ನು ಗೌರವಿಸಿದರು.