ನ್ಯೂಸ್

ರಾಜಾ ರಘುವಂಶಿಯ ಹತ್ಯೆ ಭೇದಿಸಲು ಪೊಲೀಸರಿಗೆ ಸಹಾಯವಾಗಿದ್ದೇ ಆಕೆಯ 'ಮಂಗಳಸೂತ್ರ'! | Honeymoon Case

Meghalaya Honeymoon Case : ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ ಮೇಘಾಲಯ ಹನಿಮೂನ್ ಪ್ರಕರಣದಲ್ಲಿ ಮೃತ ರಾಜಾ ರಘುವಂಶಿಯ ಹತ್ಯೆ ಭೇದಿಸಲು ಪ್ರಮುಖ ಕಾರಣವಾದ್ದೇ ಆರೋಪಿ ಸೋನಮ್ ರುಘುವಂಶಿ ಬಿಟ್ಟಿದ್ದ ಮಂಗಳಸೂತ್ರ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಐ ನೊಂಗ್ರಾಂಗ್ ಬುಧವಾರ ಹೇಳಿದ್ದಾರೆ.

ಹೌದು, ಪೊಲೀಸ್​ ವಿಚಾರಣೆ ವೇಳೆ ಆರೋಪಿ ಸೋನಮ್ ರುಘುವಂಶಿ ತನ್ನ​ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಅಲ್ಲದೆ ಈ ಪ್ರಕರಣದಲ್ಲಿ ಕೃತ್ಯಕ್ಕೆ ಸಹಕರಿಸಿದ ಇಂದೋರ್‌ನ ವಿಶಾಲ್ ಸಿಂಗ್ ಚೌಹಾಣ್ (22), ಉತ್ತರ ಪ್ರದೇಶದ ಲಲಿತಪುರದ ರಾಜ್ ಸಿಂಗ್ ಕುಶ್ವಾಹ (21) ಮತ್ತು ಆಕಾಶ್ ರಜಪೂತ್ (19) ಎಂಬುವರನ್ನು ಬಂಧಿಸಲಾಗಿದೆ. ಎಂದು ತಿಳಿಸಿದ ಡಿಜಿಐ ಈ ವೇಳೆ ಪ್ರಕರಣ ಭೇದಿಸಿದ್ದರ ಬಗ್ಗೆ ತಿಳಿಸಿದ್ದಾರೆ.

ಪ್ರಕರಣದಲ್ಲಿ ಮಂಗಳಸೂತ್ರ ಸಹಾಯವಾಗಿದ್ದೇಗೆ..?

ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದ ತನಿಖೆಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಯ ಪ್ರಕಾರ, ದಂಪತಿಗಳು ಮೇ.22 ರಂದು ಬುಕಿಂಗ್ ಇಲ್ಲದೆ ಸೊಹ್ರಾದಲ್ಲಿರುವ ಹೋಂಸ್ಟೇಗೆ ಬಂದರು. ಯಾವುದೇ ಕೊಠಡಿ ಲಭ್ಯವಿಲ್ಲದ ಕಾರಣ, ಅವರು ತಮ್ಮ ಸೂಟ್‌ಕೇಸ್ ಅನ್ನು ಹೋಂಸ್ಟೇಯಲ್ಲಿಯೇ ಬಿಟ್ಟುಹೋದರು. ಯಾಕೆಂದ್ರೆ 3,000 ಕ್ಕೂ ಹೆಚ್ಚು ಮೆಟ್ಟಿಲುಗಳ ಮೇಲೆ ನೊಂಗ್ರಿಯಾಟ್ ಗ್ರಾಮಕ್ಕೆ ಹೋಗುವುದು ಕಷ್ಟ ಎಂದು ಪರಿಗಣಿಸಿ, ಅಲ್ಲೇ ಸೂಟ್‌ಕೇಸ್ ಬಿಟ್ಟು ಹೋಗಿದ್ದಾರೆ.

ಸೋಹ್ರಾದ ಹೋಂಸ್ಟೇಯಲ್ಲಿ ದಂಪತಿಗಳು ಬಿಟ್ಟು ಹೋಗಿದ್ದ ಸೂಟ್‌ಕೇಸ್‌ನಿಂದ ನಾವು ಸೋನಂ ಅವರ 'ಮಂಗಳಸೂತ್ರ' ಮತ್ತು ಉಂಗುರವನ್ನು ವಶಪಡಿಸಿಕೊಂಡಿದ್ದೇವೆ. ವಿವಾಹಿತ ಮಹಿಳೆಯೊಬ್ಬರು ಆಭರಣಗಳನ್ನು ಬಿಟ್ಟು ಹೋಗಿದ್ದು, ಪ್ರಕರಣದಲ್ಲಿ ಶಂಕಿತಳಾಗಿ ಅವರನ್ನು ಹಿಂಬಾಲಿಸಲು ನಮಗೆ ಸುಳಿವು ನೀಡಿದೆ ಎಂದು ಡಿಜಿಪಿ ನೊಂಗ್ರಾಂಗ್ ಪಿಟಿಐಗೆ ತಿಳಿಸಿದರು.

ಸೊಹ್ರಾಗೆ ಹಿಂತಿರುಗಿ ಪಾದಯಾತ್ರೆ ಮಾಡಿದ ನಂತರ, ಅವರು ಪಾರ್ಕಿಂಗ್ ಪ್ರದೇಶದಿಂದ ತಮ್ಮ ಸ್ಕೂಟರ್ ಅನ್ನು ತೆಗೆದುಕೊಂಡು ವೈಸಾವ್ಡಾಂಗ್ ಜಲಪಾತಕ್ಕೆ ಹೋದರು. ಅಲ್ಲಿ, ರಾಜಾ ಅವರನ್ನು ಮೂವರು ಗುತ್ತಿಗೆ ಕೊಲೆಗಾರರು ಅವರ ಪತ್ನಿಯ ಸಮ್ಮುಖದಲ್ಲಿ ಕೊಲೆ ಮಾಡಿದ್ದಾರೆ ಎಂದು ಅಧಿಕಾರಿ ಹೇಳಿದರು.

ಪ್ರಕರಣ ಏನು..?

ಮಧ್ಯಪ್ರದೇಶದ ಇಂದೋರ್‌ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಮೇ 11 ರಂದು ವಿವಾಹವಾದರು. ಅದೇ ತಿಂಗಳು 20 ರಂದು ಅವರು ತಮ್ಮ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದರು. ಆರಂಭದಲ್ಲಿ, ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಯೋಜಿಸಿದ್ದರು. ಆದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಿದ್ದರಿಂದ ಮೇಘಾಲಯಕ್ಕೆ ತಮ್ಮ ಪ್ಲಾನ್​ ಬದಲಾಯಿಸಿದರು. ನವದಂಪತಿ ಮೇ 20 ರಂದು ತಮ್ಮ ಹನಿಮೂನ್‌ಗೆ ಮೇಘಾಲಯಕ್ಕೆ ತೆರಳಿದರು. ಮೇ.23 ರಂದು ಪ್ರವಾಸದ ಸೋಗಿನಲ್ಲಿ ರಾಜಾನನ್ನು ಕೊಲೆ ಮಾಡಿದ್ದಾರೆ.(ಏಜೆನ್ಸೀಸ್​​)