ನ್ಯೂಸ್

ನಟಿಯಾಗಬೇಕಿದ್ದರೆ ಇದನ್ನು ಕಲಿಯಲೇಬೇಕು; ಅಜ್ಜ ರಾಜ್ ಕಪೂರ್​​ ಸಲಹೆ ಕುರಿತು Kareena Kapoor ಮಾತು

ಮುಂಬೈ: ಬಾಲಿವುಡ್​ನ ಟಾಪ್​ ನಟಿಯರಲ್ಲಿ ಒಬ್ಬರು ಕರೀನಾ ಕಪೂರ್​​( Kareena Kapoor). ಸೈಫ್​ ಅಲಿ ಖಾನ್​ ಅವರು 2012 ಅಕ್ಟೋಬರ್​ 16ರಂದು ಸೈಫ್ ಅಲಿ ಖಾನ್ ಅವರನ್ನು ವಿವಾಹವಾಗಿದ್ದು ಗೊತ್ತೆ ಇದೆ. ತಮ್ಮ ಮೊದಲ ಮಗ ತೈಮೂರ್​ ಅಲಿ ಖಾನ್​ ಹೆಸರಿನ ವಿವಾದ ಹಾಗೂ ಜನರು ಮಗನ ಹೆಸರಿಗೆ ನೀಡಿದ ಪ್ರತಿಕ್ರಿಯೆ ಕುರಿತು ಕರೀನಾ ಬಹಿರಂಗಪಡಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಕರೀನಾ ಕಪೂರ್​​ ತಮ್ಮ ಹಿರಿಯ ಮಗನಿಗೆ ತೈಮೂರ್ ಹೆಸರಿಡುವ ವಿವಾದದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು ಜನರು ತೈಮೂರ್ ಹೆಸರನ್ನು ಬದಲಾಯಿಸುವಂತೆ ಸೂಚಿಸಿದ್ದರು ಎಂದು ಹೇಳಿದ್ದಾರೆ. ಈ ವಿವಾದ ತನ್ನ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ವಿವರಿಸಿರುವ ನಟಿ ತಾನು ಅದರಿಂದ ಹೇಗೆ ಹೊರಬಂದೆ ಎಂಬುದನ್ನು ತಿಳಿಸಿದ್ದಾರೆ.

ತೈಮೂರ್​ ಹೆಸರನ್ನು ಬದಲಾಯಿಸುವಂತೆ ಜನರು ಹೇಳುತ್ತಿದ್ದದ್ದು ನನ್ನ ಮೇಲೆ ಪರಿಣಾಮ ಬೀರಿತ್ತು. ಆದರೆ ಸೈಫ್ ಅಲಿಖಾನ್ ಈ ವಿಷಯದಲ್ಲಿ ತುಂಬಾ ಶಾಂತವಾಗಿದ್ದರು ಎಂದು ಹೇಳಿದರು. ಈ ಘಟನೆಯ ಸಮಯದಲ್ಲಿ ನನಗೆ ನನ್ನ ಅಜ್ಜ ರಾಜ್​ ಕಪೂರ್​ ನೀಡಿದ್ದ ಸಲಹೆ ನೆನಪಿಸಿಕೊಂಡು ಅದರಿಂದ ಹೊರಬಂದೆ.

ನನ್ನ ಅಜ್ಜ ರಾಜ್​ಕಪೂರ್​ ಜನರು ಸೆಲೆಬ್ರಿಟಿಗಳ ಬಗ್ಗೆ ಮಾತನಾಡುವಾಗ ಹೇಗೆ ಪ್ರತಿಕ್ರಿಯಿಸಬೇಕು ಎಂದು ಹೇಳಿದ್ದರು. ನೀನು ನಟಿಯಾಗಬೇಕಾದರೆ ನಿನ್ನ ಹೃದಯವನ್ನು ಕಲ್ಲಾಗಿಸಿಕೊಳ್ಳುವ ವಿಷಯವನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದರು. ಜನರು ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನೂ ಮಾತನಾಡುತ್ತಾರೆ. ಅವರು ಏಕೆ ಮಾತನಾಡುತ್ತಾರೆ ಎಂಬುದಕ್ಕಿಂತ ನೀನು ನಿನ್ನ ಹೃದಯವನ್ನು ಕಲ್ಲಾಗಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನೀನು ಸಿನಿಮಾರಂಗಕ್ಕೆ ಬಂದು ನಟಿಯಾಗಬೇಕಾದರೆ ಇದು ಮುಖ್ಯ, ಇಲ್ಲದಿದ್ದರೆ ಈ ಸ್ಥಳ ನಿನಗಲ್ಲ ಎಂದಿದ್ದರು ಎಂದು ಕರೀನಾ ತಿಳಿಸಿದರು.

ಜನರು ತೈಮೂರ್​ ಹೆಸರಿನ ಬಗ್ಗೆ ಮಾತನಾಡುವಾಗ ನನಗೆ ವ್ಯತ್ಯಾಸವನ್ನುಂಟುಮಾಡಿದೆ. ಈ ಹೆಸರಿನ ಸುತ್ತ ಡ್ರಾಮಾ ನಡೆಯುತ್ತಲೆ ಇತ್ತು, ಈಗ ಇದ್ದಕ್ಕಿದ್ದಂತೆ ಎಲ್ಲರೂ ಇಷ್ಟಪಡುತ್ತಿದ್ದಾರೆ. ಸರಿ ಅದು ಏನೇ ಇರಲಿ ಈ ಕುರಿತು ಅವನಿಗೆ ತಿಳಿದಿರುವುದಿಲ್ಲ, ಆದರೆ ಜನರು ಅವನ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಏಕೆಂದರೆ ನಿಮಗೆ ಅವನ ಪರಿಚಯವೇ ಇಲ್ಲ. ಅವನು ತುಂಬಾ ಚಿಕ್ಕವನು. ಹಾಗಾಗಿ ಈಗ ಜನರು ತೈಮೂರ್​​ನನ್ನು ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವನನ್ನು ಅನುಸರಿಸುತ್ತಾರೆ. ಸಂಪೂರ್ಣ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕರೀನಾ ತಿಳಿಸಿದರು.

ನವೆಂಬರ್​ 1ರಂದು ಬಿಡುಗಡೆಯಾಗಲಿರುವ ಸಿಂಗಮ್​ ಎಗೈನ್​​ ಸಿನಿಮಾದಲ್ಲಿ ಕರೀನಾ ಕಪೂರ್​ ಅವರನ್ನು ಕಾಣಬಹುದಾಗಿದೆ. ಇತ್ತೀಚೆಗೆ ಸಿನಿಮಾದ ಟ್ರೇಲರ್​ ಕೂಡು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಕರೀನಾ ಈ ಚಿತ್ರದಲ್ಲಿ ಅವ್ನಿ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್​​)​