ನ್ಯೂಸ್

ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು; ಕ್ಕೀರಪ್ಪ ಇಂಗಳಗಿ

Haveri - Kariyappa Aralikatti

ರಾಣೆಬೆನ್ನೂರ: ವಿದ್ಯಾಥಿರ್ಗಳು ಪ್ರಸ್ತುತ ದಿನಮಾನಗಳಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಜತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ನಗರಸಭೆ ಆಯುಕ್ತ ಕ್ಕೀರಪ್ಪ ಇಂಗಳಗಿ ಹೇಳಿದರು.

ತಾಲೂಕಿನ ಕಮದೋಡ ಗ್ರಾಮದ ರೇನ್​ಬೋ ವಸತಿಯುತ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಾಷಿರ್ಕ ಇಂಟರ್​ ಹೌಸ್​ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಹರ ಠಾಣೆ ಪಿಎಸ್​ಐ ಗಡ್ಡೆಪ್ಪ ಗುಂಜುಟಗಿ ಮಾತನಾಡಿ, ವಿದ್ಯಾಥಿರ್ಗಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೆ ಶಾಲಾ&ಕಾಲೇಜ್​ ಹಂತದಲ್ಲಿ ನಡೆಯುವ ಕ್ರೀಡಾಕೂಟ ಸೇರಿ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದರು.

ಪ್ರಮುಖರಾದ ಬಿ.ಎಸ್​. ಪಟ್ಟಣಶೆಟ್ಟಿ, ಎಸ್​.ಬಿ. ಗುರಿಕಾರ, ಡಾ. ಸುರೇಶ ಸಿ.ಟಿ., ಲಲಿತಾ ಸುರೇಶ, ಎಸ್​.ಎನ್​. ಕಟ್ಟಿಮನಿ, ಮಾಲತೇಶ ಐ.ಕೆ., ವೀರಣ್ಣ ಸಿ.ಟಿ. ಮತ್ತಿತರರು ಪಾಲ್ಗೊಂಡಿದ್ದರು.