ತರೀಕೆರೆ: ತಾಲೂಕಿನ ಹಿರೇಕಾತೂರು ಗೇಟ್ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮರದ ಕೊಂಬೆ ಮುರಿದು ಬಿದ್ದು ವಾಹನ ಸವಾರರು ಪರದಾಡುವಂತಾಯಿತು.
ಕಳೆದೊಂದು ವಾರದಿಂದ ಸತತ ಸುರಿಯುತ್ತಿರುವ ಜಡಿ ಮಳೆಗೆ ಬೆಂಗಳೂರು-ಹೊನ್ನಾವರ ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲೆ ರಸ್ತೆಬದಿ ಬೆಳೆದು ನಿಂತಿದ್ದ ಕಾಡು ್ಜಅತಿಯ ಮರದ ಕೊಂಬೆವೊಂದು ಬೆಳ್ಳಂಬೆಳಗ್ಗೆಯೇ ಮುರಿದು ಬಿದ್ದಿತ್ತು. ಬೆಳಗ್ಗೆ 11 ಗಂಟೆಯಾದರೂ ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದಿದ್ದ ಕೊಂಬೆ ತೆರವುಗೊಳಿಸದ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸಿದ ವಾಹನಗಳು ನಿಧಾನಗತಿಯಲ್ಲಿ ಸಾಗುವಂತಾಯಿತು.
ಸಾರ್ವಜನಿಕರು ನೀಡಿದ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುರಿದು ಬಿದ್ದಿದ್ದ ಮರದ ಕೊಂಬೆಯನ್ನು ಟ್ರಾೃಕ್ಟರ್ ಸಹಾಯದಿಂದ ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದರು. ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ರಾಜೇಂದ್ರ ಸೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.