ದಕ್ಷಿಣ ಕನ್ನಡ ಜಿಲ್ಲೆ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಶುಕ್ರವಾರ ಬಿಡುವು ನೀಡಿದ್ದು, ದಿನವಿಡೀ ಬಿಸಿಲು ವಾತವರಣ ಮುಂದುವರಿದಿತ್ತು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಶುಕ್ರವಾರ ಬಿಡುವು ನೀಡಿದ್ದು, ದಿನವಿಡೀ ಬಿಸಿಲು ವಾತವರಣ ಮುಂದುವರಿದಿತ್ತು.
ದ.ಕ. ಜಿಲ್ಲೆಯ ಹಲವೆಡೆ ಶುಕ್ರವಾರ ಕೆಲಕಾಲ ಹನಿ ಮಳೆಯಾಗಿದ್ದು, ಹೊರತು ಪಡಿಸಿ ದಿನವಿಡೀ ಮಳೆ ದೂರವಾಗಿ, ಬಿಸಿಲಿನ ವಾತವರಣ ಹೊಂದಿತ್ತು. ಶುಕ್ರವಾರ ಬೆಳಗ್ಗೆವರೆಗೆ 24 ಗಂಟೆಯಲ್ಲಿ ದ.ಕ. ಜಿಲ್ಲೆಯ ಬೆಳ್ತಂಗಡಿಯಲ್ಲಿ 18.9 ಮಿ.ಮೀ., ಬಂಟ್ವಾಳದಲ್ಲಿ 7.3 ಮಿ.ಮೀ., ಮಂಗಳೂರಿನಲ್ಲಿ 5.8 ಮಿ.ಮೀ., ಪುತ್ತೂರಿನಲ್ಲಿ 18.3 ಮಿ.ಮೀ., ಸುಳ್ಯದಲ್ಲಿ 7.6 ಮಿ.ಮೀ., ಮೂಡುಬಿದಿರೆಯಲ್ಲಿ 15.2 ಮಿ.ಮೀ., ಕಡಬದಲ್ಲಿ 31.7 ಮಿ.ಮೀ., ಮೂಲ್ಕಿಯಲ್ಲಿ 3.7 ಮಿ.ಮೀ., ಉಳ್ಳಾಲದಲ್ಲಿ 5.1 ಮಿ.ಮೀ. ಮಳೆಯಾಗಿದೆ.
ಶನಿವಾರ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಕಡಿಮೆ ಇರಬಹುದು. ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 11ರಂದು ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಕಾಸರಗೋಡು, ದಕ್ಷಿಣ ಜಿಲ್ಲೆಗಳಲ್ಲಿ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. 12ರಿಂದ ಮೋಡ ಹಾಗೂ ಬಿಸಿಲಿನ ವಾತಾವರಣದ ಲಕ್ಷಣಗಳಿವೆ.