ಮುರಾಸು ಸೈಕ್ಲೋನ್‌  
ನ್ಯೂಸ್

ಮುರಾಸು ಸೈಕ್ಲೋನ್‌ನಿಂದ ಕರ್ನಾಟಕದ ಕೆಲವೆಡೆ ಮಳೆ - Cyclone Murasu

ಸೈಕ್ಲೋನ್ ಪರಿಣಾಮ ಕರ್ನಾಟಕದ ಕೆಲವೆ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ. ಉಡುಪಿ, ದಕ್ಷಿಣ ಕನ್ನಡದಲ್ಲಿ ಮುಂದಿನ 3 ದಿನ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ನ.4ರಿಂದ ನ.6ರವರೆಗೆ ವ್ಯಾಪಕ ಮಳೆಯಾಗುವ ಸಂಭವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಹಾಸನ, ಕೊಡಗು, ಬೆಂ.ದಕ್ಷಿಣ ಮೈಸೂರು ಮತ್ತು ಚಾಮರಾಜನಗರದಲ್ಲಿ ನ.3, ಚಿತ್ರದುರ್ಗ, ದಾವಣಗೆರೆ,ತುಮಕೂರಿನಲ್ಲಿ ನ.4ರಂದು ಯೆಲ್ಲೋ ಅಲರ್ಟ್ ಇರಲಿದೆ.

ಬೆಂಗಳೂರು: (Cyclone Murasu) ‘ಅರ್ನಬ್’ ಚಂಡಮಾರುತ ಪರಿಣಾಮದಿಂದ ಚೇತರಿಸಿಕೊಳ್ಳುವ ಮುನ್ನವೇ ಭಾರತದ ಪೂರ್ವ ಕರಾವಳಿಗೆ ಸೋಮವಾರ ‘ಮುರಾಸು’ ಚಂಡಮಾರುತ ರೂಪುಗೊಂಡಿದೆ.

ಮಂಗಳವಾರ ಮುಂಜಾನೆ ದಕ್ಷಿಣ ಆಂಧ್ರಪ್ರದೇಶ ಕಡಲ ತೀರವನ್ನು ಸೈಕ್ಲೋನ್ ದಾಟಲಿದೆ. ಈ ವೇಳೆ ಗಾಳಿಯ ವೇಗ 100ರಿದ 110 ಕಿಮೀ ವೇಗದಲ್ಲಿ ಬೀಸಲಿದೆ. ಕೆಲವೊಮ್ಮೆ ಇದು 120 ಕಿಮೀಗೆ ತಲುಪಬಹುದು ಎಂದು ಭಾರತೀಯ ಹವಾಮಾನ ಇಲಾಖೆ( ಐಎಂಡಿ) ಮುನ್ಸೂಚನೆ ಕೊಟ್ಟಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಭಾರತದ ಪೂರ್ವ ಕರಾವಳಿ ತೀರದ ತಗ್ಗು ಪ್ರದೇಶಗಳಿಂದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ 2,000ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ. 30 ಸಾವಿರ ಜನರನ್ನು ಸುರಕ್ಷಿತ ತಾಣಗಳಿಗೆ ರವಾನಿಸಲು ಯೋಜನೆ ರೂಪಿಸಲಾಗಿದೆ.

ಭಾರತದ ಆಗ್ನೇಯ ಕರಾವಳಿ ರಾಜ್ಯಗಳಾದ ತಮಿಳುನಾಡು,ಆಂಧ್ರಪ್ರದೇಶದ ಮೇಲೆ ಮುರಾಸು ತೀವ್ರ ಪರಿಣಾಮ ಬೀರಲಿದೆ ಎಂದು ಐಎಂಡಿ ಎಚ್ಚರಿಸಿದೆ. ಹಾಗಾಗಿ, ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈನಿಂದ ಅಂದಾಜು 250-260 ಕಿ.ಮೀ ದೂರದಲ್ಲಿರುವ ಚಂಡಮಾರುತ, ಆಂಧ್ರಪ್ರದೇಶದ ದಕ್ಷಿಣ ಕರಾವಳಿಯತ್ತ ಧಾವಿಸುತ್ತಿದೆ. ದಕ್ಷಿಣ-ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಸಕ್ರಿಯವಾಗಿರುವ ಇದು ಮತ್ತಷ್ಟು ತೀವ್ರಗೊಂಡು ಚಂಡಮಾರುತವಾಗಿ ಮಾರ್ಪಟ್ಟಿದೆ.

ಕರ್ನಾಟಕದ ಕೆಲವೆಡೆ ಮಳೆ:

ಸೈಕ್ಲೋನ್ ಪರಿಣಾಮ ಕರ್ನಾಟಕದ ಕೆಲವೆ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ. ಉಡುಪಿ, ದಕ್ಷಿಣ ಕನ್ನಡದಲ್ಲಿ ಮುಂದಿನ 3 ದಿನ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ನ.4ರಿಂದ ನ.6ರವರೆಗೆ ವ್ಯಾಪಕ ಮಳೆಯಾಗುವ ಸಂಭವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಹಾಸನ, ಕೊಡಗು, ಬೆಂ.ದಕ್ಷಿಣ ಮೈಸೂರು ಮತ್ತು ಚಾಮರಾಜನಗರದಲ್ಲಿ ನ.3, ಚಿತ್ರದುರ್ಗ, ದಾವಣಗೆರೆ,ತುಮಕೂರಿನಲ್ಲಿ ನ.4ರಂದು ಯೆಲ್ಲೋ ಅಲರ್ಟ್ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ.