ನ್ಯೂಸ್

ಮೈಸೂರಲ್ಲಿ ಮಳೆಯ ಆರ್ಭಟ; ಚಾಮರಾಜನಗರದಲ್ಲೂ ತಂಪೆರೆದ ವರುಣ, ರೈತರು ಫುಲ್​ ಖುಷ್​

ಮೈಸೂರು: ಇನ್ನೇನು ಬೇಸಿಗೆ ಶುರುವಾಗಬೇಕು. ಆದರೆ ರಾಜ್ಯಾದ್ಯಂತ ಪ್ರತಿದಿನ ಒಂದಲ್ಲ, ಒಂದು ಕಡೆ ಮಳೆಯಾಗುತ್ತಿದೆ. ನಿನ್ನೆ ಬೆಳಗಾವಿ, ದಾವಣಗೆರೆ, ಗದಗ ಮತ್ತಿತರ ಕಡೆಗಳಲ್ಲಿ ಮಳೆಯಾಗಿತ್ತು.

ಇಂದು ಮೈಸೂರಿನಲ್ಲಿ ಮಧ್ಯಾಹ್ನದಿಂದಲೇ ಮಳೆಯ ಆರ್ಭಟ ಹೆಚ್ಚಾಗಿದೆ. ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣ ಇತ್ತು. ಮಧ್ಯಾಹ್ನದ ಹೊತ್ತಿಗೆ ಬಿರುಗಾಳಿ ಸಹಿತ ಜೋರು ಮಳೆಯಾಗಿದೆ. ನಗರದ ಹಲವು ಭಾಗಗಳಲ್ಲಿ ಪೂರ್ವ ಮುಂಗಾರು ಮಳೆಯ ಆರ್ಭಟ ಹೆಚ್ಚಾಗಿದೆ.

ಹಾಗೇ ಚಾಮರಾಜನಗರದಲ್ಲಿಯೂ ಕೂಡ ಮಳೆಯ ಸಿಂಚನ ಆಗಿದೆ. ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ವರುಣ ತಂಪೆರಿದ್ದಾನೆ. ಸುಮಾರು 20 ನಿಮಿಷಗಳಿಗೂ ಅಧಿಕ ಕಾಲ ಸುರಿದ ಮಳೆಯಿಂದ ರೈತರೂ ಫುಲ್​ ಖುಷಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್)