ಸಾಗರ ತಾಲೂಕಿನ ಮಾಸೂರಿನಲ್ಲಿ ಗಾಳಿ ಸಹಿತಿ ಮಳೆಯಿಂದಾಗಿ ಮನೆ ಛಾವಣಿಯ ಶೀಟ್‌ಗಳು ಹಾರಿಹೋಗಿರುವುದು.  
ನ್ಯೂಸ್

ಮಳೆಯಿಂದ ಮನೆಗಳಿಗೆ ಹಾನಿ

ಸಾಗರ: ಸಾಗರ ತಾಲೂಕಿನ ವಿವಿಧೆಡೆ ಶನಿವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಯಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಮಾಸೂರು ಪೇಟೆಯ ಉಮೇಶ್ ಎಂಬುವವರ ಮನೆಯ ಮೇಲ್ಛಾವಣಿಯ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ. ಮರಗಳು ಬಿದ್ದು ಮನೆಗಳು ಹಾನಿಗೀಡಾಗಿವೆ. ಮನೆಯೊಳಗಿದ್ದ ದಿನಬಳಕೆ ವಸ್ತುಗಳು ನಾಶವಾಗಿವೆ. ಗ್ರಾಮದ ರಸ್ತೆಗಳಲ್ಲಿ ಬೃಹತ್ ಮರಗಳು ನೆಲಕ್ಕುರುಳಿ ಕೆಲ ಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು. ನಂತರ ಗ್ರಾಪಂನಿಂದ ಜೆಸಿಬಿ ಮೂಲಕ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಹಾನಿ ಪ್ರದೇಶಕ್ಕೆ ಮಾಸೂರು ಗ್ರಾಪಂ ಅಧ್ಯಕ್ಷ ನಾರಾಯಣಪ್ಪ ದಿಗಟೆಕೊಪ್ಪ, ಸದಸ್ಯ ವೆಂಕಟೇಶ್ ಮೆಳವರಿಗೆ ಭೇಟಿ ನೀಡಿ, ಪಂಚಾಯಿತಿಯಿಂದ ನೆರವಿನ ಭರವಸೆ ನೀಡಿದರು.