ಬೆಂಗಳೂರು:
ಸತತ ಮಳೆ ಆಗುತ್ತಿರುವ ಕಾರಣ ಭೂಮಿ ಬಾಯಾರಿಕೆ ಕಡಿಮೆಯಾಗಿದೆ. ಹದವಾದ ಮಳೆಗೆ ತೆಂಗಿನ ಮತ್ತು ಅಡಿಕೆ ತೋಟಗಳಿಗೆ ಅನುಕೂಲವಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಉಂಟಾಗಿದ್ದ ಹಾಹಾಕಾರವೂ ಕಡಿಮೆಯಾಗಿದೆ. ರೈತರು ಪಂಪ್ ಸೆಟ್‌ಗಳನ್ನು ಬಳಕೆ ಮಾಡುವುದು ಗಣನೀಯವಾಗಿ ತಗ್ಗಿದೆ.
ತಗ್ಗಿದ ಇಂಧನ ಬೇಡಿಕೆ
ಕಳೆದ ಮೂರು ದಿನಗಳಿಂದ ಉತ್ತಮ ಮಳೆ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ 5 ಸಾವಿರ ಮೆಗಾವ್ಯಾಟ್ ಕಡಿಮೆಯಾಗಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಕಳೆದ ವಾರ 15 ಸಾವಿರ ಮೆವಾ ಇದ್ದ ವಿದ್ಯುತ್ ಬೇಡಿಕೆ 10474 ಸಾವಿರ ಮೆವಾ ಕ್ಕೆ ಇಳಿದಿದೆ. ಈ ವರ್ಷದ ಗರಿಷ್ಠ ಬೇಡಿಕೆ 16 ಸಾವಿರ ಮೆಗಾವ್ಯಾಟ್‌ಗೆ ಜಿಗಿದಿದ್ದು ದಾಖಲೆಯಾಗಿತ್ತು.
ಶುಕ್ರವಾರ ಬೆಸ್ಕಾಂನಲ್ಲಿ ಅತಿ ಹೆಚ್ಚು 5233 ಮೆವಾ ಬೇಡಿಕೆ ಇದ್ದರೆ, ಅತಿ ಕಡಿಮೆ ಬೇಡಿಕೆ ಮೆಸ್ಕಾಂನಲ್ಲಿ 925 ದಾಖಲಾಗಿದೆ. ಸೆಸ್ಕ್‌ನಲ್ಲಿ 1095 ಮೆವಾ, ಜೆಸ್ಕಾಂನಲ್ಲಿ 1084 ಮೆವಾ, ಹೆಸ್ಕಾಂನಲ್ಲಿ 1666 ಮೆವಾ, ಮೆವಾ ವಿದ್ಯುತ್ ಬೇಡಿಕೆ ಇತ್ತು.
ಸಾಧಾರಣ ವಾತಾವರಣ ಎಲ್ಲೆಡೆ ಇರುವುದರಿಂದ ಗ್ರಾಹಕರ ಗೃಹೋಪಯೋಗಿ ವಿದ್ಯುತ್ ಬಳಕೆ ಪ್ರಮಾಣವೂ ಕಡಿಮೆಯಾಗಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.