ಆನಂದಪುರದಲ್ಲಿ ಸುರಿದ ಮಳೆಯಿಂದಾಗಿ ಬಸ್ ನಿಲ್ದಾಣ ವೃತ್ತದ ಬಳಿ ನೀರು ಹರಿಯುತ್ತಿರುವುದು. 
ನ್ಯೂಸ್

ಆನಂದಪುರ ಸುತ್ತಮುತ್ತ ಮಳೆ

ಶಿವಕುಮಾರ ಎಸ್.ಪಿ.

ಆನಂದಪುರ: ಸುತ್ತಮುತ್ತಲ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ಮೋಡ ಮುಸುಕಿದ ವಾತಾವರಣವಿತ್ತು. ಅರ್ಧ ತಾಸಿಗೊಮ್ಮೆ ಭಾರಿ ಮಳೆ ಸುರಿದಿದ್ದರಿಂದ ಸಣ್ಣಪುಟ್ಟ ಹಳ್ಳಗಳು ತುಂಬಿ ಹರಿದವು.

ಕಳೆದ ಕೆಲದಿನಗಳಿಂದ ಮಳೆ ಬಿಡುವು ನೀಡಿತ್ತು. ಮಳೆ ಕ್ಷೀಣಿಸಿದ್ದ ಕಾರಣ ಭತ್ತದ ಗದ್ದೆ, ಮೆಕ್ಕೆಜೋಳ, ಶುಂಠಿ, ಸುವರ್ಣ ಗಡ್ಡೆ, ಮರಗೆಣಸು, ಕಬ್ಬು ಇತ್ಯಾದಿ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿತ್ತು. ಕೆಲವು ಗ್ರಾಮಗಳಲ್ಲಿನ ಮಕ್ಕಿಗದ್ದೆ ಮಳೆಯಿಲ್ಲದೆ ಒಣಗಲಾರಂಭಿಸಿದ್ದವು. ಇದೀಗ ಮಳೆ ಸುರಿದಿದ್ದು ಹಲವು ರೈತರಲ್ಲಿ ಮಂದಹಾಸ ಮೂಡಿಸಿದೆ.