ನ್ಯೂಸ್

ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

ನಾಗೇಶ ಎಸ್

ಸಕಲೇಶಪುರ: ಪಟ್ಟಣದಲ್ಲಿ ಬುಧವಾರ ಸುಮಾರು ಒಂದು ಗಂಟೆ ಕಾಲ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಪಟ್ಟಣದ ಚರಂಡಿಗಳೆಲ್ಲ ತುಂಬಿ, ರಸ್ತೆಯಲ್ಲಿ ಕಾಲುವೆಯಂತೆ ನೀರು ಹರಿಯಿತು. ಇದರ ಪರಿಣಾಮ ಪಟ್ಟಣದ ಚಂಪಕನಗರ, ಬಾಳೆಗದ್ದೆ, ಹೇಮಾವತಿ ಸೇತುವೆ ಸಮೀಪದ ವಾಣಿಜ್ಯ ಮಳಿಗೆಗಳು, ಅಜಾದ್ ರಸ್ತೆ ಸೇರಿದಂತೆ ಹಲವೆಡೆ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಪರದಾಡಿದರು. ದ್ವಿಚಕ್ರ ವಾಹನ ಸವಾರರು ಮಳೆಗೆ ಸಿಲುಕಿ ಪರದಾಡಿದರು.

23 ಎಸ್‌ಕೆಪಿಪಿ 1 ಪಟ್ಟಣದ ಅಜಾದ್ ರಸ್ತೆಯಲ್ಲಿ ಅಂಗಡಿಗೆ ನುಗ್ಗಿದ ಮಳೆ ನೀರು.