ನ್ಯೂಸ್

ಹೆಚ್ಚಾಗುತ್ತಾ ರೈಲ್ವೇ ಪ್ರಯಾಣ ದರ..? ಯೂಸರ್ ಡೆವಲಪ್​ಮೆಂಟ್ ಫೀಸ್​ಗೆ ಸಿದ್ಧತೆ..

ನವದೆಹಲಿ: ಸಾರ್ವಜನಿಕರು ಪ್ರಯಾಣಕ್ಕೆ ರೈಲನ್ನು ಆಯ್ಕೆ ಮಾಡಿಕೊಳ್ಳಲು ಇರುವ ಕಾರಣದಲ್ಲಿ ಅದರ ಪ್ರಯಾಣ ದರವೂ ಒಂದು. ರಸ್ತೆ ಮಾರ್ಗಕ್ಕಿಂತ ರೈಲ್ವೇ ಪ್ರಯಾಣ ಅಗ್ಗವಾದ್ದರಿಂದಲೂ ಜನ ರೈಲಿನಲ್ಲಿ ಸಂಚರಿಸಲು ಆದ್ಯತೆ ನೀಡುತ್ತಿದ್ದಾರೆ. ಆದರೆ ಇದೀಗ ರೈಲು ಪ್ರಯಾಣ ದರ ದುಬಾರಿ ಆಗುವ ಲಕ್ಷಣ ಗೋಚರಿಸಿದೆ.

ಕೇಂದ್ರ ಸರ್ಕಾರ ರೈಲ್ವೇ ಪ್ರಯಾಣಕ್ಕೆ ಯೂಸರ್​ ಡೆವಲಪ್​ಮೆಂಟ್​ ಫೀಸ್ ​(ಯುಡಿಎಫ್​) ವಿಧಿಸುವ ಚಿಂತನೆಯಲ್ಲಿದೆ. ಇನ್ನು ಒಂದು ತಿಂಗಳಲ್ಲಿ ಅದಕ್ಕೆ ಅನುಮೋದನೆ ನೀಡುವ ನಿಟ್ಟಿನಲ್ಲೂ ಮಾತುಕತೆ ನಡೆದಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಹಾಗಾದಲ್ಲಿ ಎಸಿ ಹಾಗೂ ಸ್ಲೀಪರ್ ಕ್ಲಾಸ್​ ಪ್ರಯಾಣ ದರದಲ್ಲಿ ಹೆಚ್ಚಳ ಆಗಲಿದೆ.

ಸದ್ಯದ ಮಾಹಿತಿ ಪ್ರಕಾರ ಎಸಿ1 ಕೆಟಗರಿಯಲ್ಲಿ 35ರಿಂದ 40 ರೂ., ಎಸಿ 2ನಲ್ಲಿ ಸುಮಾರು 30 ರೂ., ಎಸಿ 3ನಲ್ಲಿ 25ರಿಂದ 30 ರೂ. ಮತ್ತು ಸ್ಲೀಪರ್ ಕ್ಲಾಸ್​​ನಲ್ಲಿ ಹತ್ತು ರೂ. ಹೆಚ್ಚಳ ಆಗುವ ಸಾಧ್ಯತೆ ಇದೆ. (ಏಜೆನ್ಸೀಸ್​)