ನ್ಯೂಸ್

ಭಾರತದ ಅತಿ ದೊಡ್ಡ ಉಪ್ಪಿನ ಸರೋವರದ ಮೂಲಕ ರೈಲು ಹಾದು ಹೋಗುವ ವಿಡಿಯೋ ವೈರಲ್

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆ ವಿಡಿಯೋಗಳಲ್ಲಿ ಕೆಲವೊಮ್ಮೆ ನಾವು ನಮ್ಮ ದೇಶದ ಸುಂದರ ನೋಟ ತೋರಿಸಿರುವುದನ್ನು ನೋಡಿರುತ್ತೇವೆ. ಅಂದಹಾಗೆ ಕೆಲವೇ ದಿನಗಳ ಹಿಂದೆ, ಭಾರತದ ಕೊನೆಯ ರಸ್ತೆಯ ವಿಡಿಯೋ ವೈರಲ್ ಆಗಿದ್ದು ಅದನ್ನು ಭಾರತ ಸರ್ಕಾರವು ಹಂಚಿಕೊಂಡಿದೆ. ಆ ಭವ್ಯ ದೃಶ್ಯವನ್ನು ನೋಡಿದ ಜನರು ಮಂತ್ರಮುಗ್ಧರಾಗಿದ್ದಾರೆ. ಇದೀಗ ಈ ವಿಡಿಯೋದಲ್ಲಿ ಏನೆನೆಲ್ಲಾ ನೋಡಬಹುದು ಬನ್ನಿ ನೋಡೋಣ...

ವಿಡಿಯೋ ಹಂಚಿಕೊಂಡ ರೈಲ್ವೆ ಸಚಿವರು

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿದ್ದು, ರೈಲು ಸರೋವರದ ಬಳಿ ಹಾದು ಹೋಗುತ್ತಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಈ ರೈಲು ಯಾವುದೇ ಸಾಮಾನ್ಯ ಸರೋವರದ ಬಳಿ ಹಾದುಹೋಗುವುದಿಲ್ಲ. ಭಾರತದ ಅತಿದೊಡ್ಡ ಉಪ್ಪು ನೀರಿನ ಸರೋವರದ ಬಳಿ ಹಾದುಹೋಗುತ್ತದೆ. ಡ್ರೋನ್‌ನಿಂದ ರೆಕಾರ್ಡ್ ಆಗಿರುವ ಈ ದೃಶ್ಯ ಖಂಡಿತವಾಗಿಯೂ ನಿಮ್ಮ ಮನ ತಟ್ಟುತ್ತದೆ. ಅಶ್ವಿನಿ ವೈಷ್ಣವ್ ಅವರು ಈ ವಿಡಿಯೋವನ್ನು ಹಂಚಿಕೊಂಡು, 'ಭಾರತದ ಅತಿದೊಡ್ಡ ಒಳನಾಡಿನ ಉಪ್ಪಿನ ಸರೋವರದಲ್ಲಿ ರಮಣೀಯ ರೈಲು ಪ್ರಯಾಣ' ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ಬರೆಯುವ ತನಕ 2 ಲಕ್ಷದ 43 ಸಾವಿರ ಮಂದಿ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನೋಡಿದ ನಂತರ, ಬಳಕೆದಾರರು "ಉತ್ತಮ ನೋಟ ಸರ್", "ಇದು ತುಂಬಾ ಸುಂದರವಾಗಿದೆ" ಎಂದೆಲ್ಲಾ ಹಾಡಿ ಹೊಗಳುತ್ತಿದ್ದಾರೆ.

ಪ್ಪಿನ ಸರೋವರ ಎಲ್ಲಿದೆ?

ಭಾರತದ ಅತಿದೊಡ್ಡ ಪ್ಪಿನ ಸರೋವರವು ಜೈಪುರದಿಂದ ಸುಮಾರು 80 ಕಿಮೀ ದೂರದಲ್ಲಿ ರಾಜಸ್ಥಾನದಲ್ಲಿದೆ. ಈ ಸರೋವರದ ಹೆಸರು ಸಂಭಾರ್ ಸರೋವರ, ಇದನ್ನು ಸಾಲ್ಟ್ ಲೇಕ್ ಎಂದೂ ಕರೆಯುತ್ತಾರೆ. ಈ ಸರೋವರವು 22.5 ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ. ಈ ಸರೋವರದ ಮೂಲಕ ಪ್ರತಿ ವರ್ಷ 1 ಲಕ್ಷದ 96 ಸಾವಿರ ಟನ್ ಶುದ್ಧ ಉಪ್ಪು ಉತ್ಪಾದನೆಯಾಗುತ್ತದೆ.