ಬಳ್ಳಾರಿ ಡಿಸಿ ಕಚೇರಿ ಆವರಣದಲ್ಲಿ ರೈಲ್ವೆ ಮಾರ್ಗ ಭೂಸ್ವಾಧೀನ ವಿರೋಧಿ ಹೋರಾಟ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ಡಿ.ನಾಗರಾಜ, ಪಿ.ಶಿವಶಂಕರ, ಡಿ.ಬಸವರಾಜ, ಕೊಟ್ರೇಶ್, ನಾಗರಾಜ, ಮಾರೇಶ ಇತರರಿದ್ದರು. 
ನ್ಯೂಸ್

ನೀರಾವರಿ ಜಮೀನಿನಲ್ಲಿ ರೈಲು ಮಾರ್ಗ ಸಲ್ಲ

ಬಳ್ಳಾರಿ: ತಾಲೂಕು ವ್ಯಾಪ್ತಿಯ ಹದ್ದಿನಗುಂಡು ಹಾಗೂ ಕೊಳಗಲ್ ಬಳಿ ಉದ್ದೇಶಿತ ರೈಲು ಮಾರ್ಗ ಬದಲಾವಣೆಗೆ ಒತ್ತಾಯಿಸಿ ನಗರದ ಡಿಸಿ ಕಚೇರಿ ಆವರಣದಲ್ಲಿ ರೈಲ್ವೆ ಮಾರ್ಗ ಭೂಸ್ವಾಧೀನ ವಿರೋಧಿ ಹೋರಾಟ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಹದ್ದಿನಗುಂಡಿನಿಂದ ಚಾಗನೂರು, ಕಪ್ಪಗಲ್, ಸಿರಿವಾರ, ಬಾಲಾಜಿ ಕ್ಯಾಂಪ್, ಶ್ರೀಧರಗಡ್ಡೆ, ಲಕ್ಷ್ಮೀ ನಗರ, ಸೋಮಸಮುದ್ರ ಮಾರ್ಗದಿಂದ ಕೊಳಗಲ್ ಮಾರ್ಗಕ್ಕೆ ರೈಲು ಮಾರ್ಗ ನಿರ್ಮಿಸಲು ಡ್ರೋನ್ ಸರ್ವೇ ಮಾಡಲಾಗುತ್ತಿದೆ. ರೈಲು ಹಳಿ ನಿರ್ಮಾಣಕ್ಕೆ ಆಯ್ಕೆ ಮಾಡಲಾದ ಸ್ಥಳದಲ್ಲಿ ಎಸ್‌ಸಿ, ಎಸ್ಟಿ ಸಮುದಾಯದ ರೈತರು ಜೀವನೋಪಾಯಕ್ಕಾಗಿ ಒಂದು, ಎರಡು ಎಕರೆ ನೀರಾವರಿ ಜಮೀನು ಹೊಂದಿದ್ದಾರೆ. ಈ ಜಮೀನಿನಲ್ಲಿ ಹಳಿ ನಿರ್ಮಿಸಿದರೆ ರೈತ ಕುಟುಂಬಗಳು ಬೀದಿಗೆ ಬರುತ್ತವೆ. ಅಲ್ಲದೆ, ಅನೇಕ ವಾಣಿಜ್ಯ ಮತ್ತು ವಸತಿ ಲೇಔಟ್‌ಗಳಿವೆ. ರೈತರ ಹಿತದೃಷ್ಟಿಯಿಂದ ನೀರಾವರಿ ಜಮೀನು ಹೊರತುಪಡಿಸಿ ಹಗರಿಯಿಂದ ಓಬಳಾಪುರಂ ಮಾರ್ಗಕ್ಕೆ ಹೊಂದಿಕೊಳ್ಳುವಂತೆ ಹೊಸ ರೈಲು ಮಾರ್ಗ ನಿರ್ಮಿಸಬೇಕು ಎಂದು ಒತ್ತಾಯಿಸಲಾಯಿತು.