ರಾಯಚೂರು: ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿಯಲ್ಲಿ 3.92 ಕೋಟಿ ರೂ.ಸಂಗ್ರಹವಾಗಿದೆ. ನವೆಂಬರ್ ತಿಂಗಳ ಅಂತ್ಯಕ್ಕೆ ಶ್ರೀಮಠದ ಅಧಿಕಾರಿ, ಸಿಬ್ಬಂದಿ ಬುಧವಾರ ಹಾಗೂ ಗುರುವಾರ ಎರಡು ದಿನ 31 ದಿನಗಳ ಹುಂಡಿ ಎಣಿಕೆ ಕಾರ್ಯ ನಡೆಸಿದ್ದು, 3,92,58,940 ರೂ. ಸಂಗ್ರಹವಾಗಿದೆ.
ಇದಲ್ಲದೇ ಹರಕೆ ರೂಪದಲ್ಲಿ ಭಕ್ತರು 174.500 ಗ್ರಾಮ ಚಿನ್ನ, 1.270 ಕೆ.ಜಿ ಬೆಳ್ಳಿ ರಾಯರಿಗೆ ಸಮರ್ಪಿಸಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.