ನ್ಯೂಸ್

ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆ: ರಾಹುಲ್​ ಏನಂದ್ರು ಗೊತ್ತಾ?

ತಿರುಪತಿ: ವಿಶ್ವವಿಖ್ಯಾತ ಧಾರ್ಮಿಕ ಯಾತ್ರಾಸ್ಥಳ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಕಲುಷಿತ ತುಪ್ಪ ಬಳಸಲಾಗುತ್ತಿದೆ ಎಂಬ ಸುದ್ದಿಗೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಲಾಗಿದೆ ಎಂಬ ಸುದ್ದಿ ಕಳವಳಕಾರಿಯಾಗಿದೆ. ಬಾಲಾಜಿ ದೇವರನ್ನು ಪ್ರಪಂಚದಾದ್ಯಂತ ಮತ್ತು ಭಾರತದಾದ್ಯಂತ ಕೋಟಿಗಟ್ಟಲೆ ಜನರು ಪೂಜಿಸುತ್ತಾರೆ. ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಿರುವುದು ಪ್ರತಿಯೊಬ್ಬ ಭಕ್ತರಿಗೂ ನೋವುಂಟು ಮಾಡುತ್ತದೆ ಎಂದಿದ್ದಾರೆ.

ಲಡ್ಡು ತಯಾರಿಕೆಗೆ ಕಲುಷಿತ ತುಪ್ಪ ಸರಬರಾಜು ಮಾಡಿದ ವಿಷಯವನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕು. ದೇಶದಲ್ಲಿ ದೇಗುಲಗಳ ಪಾವಿತ್ರ್ಯತೆ ಕಾಪಾಡಬೇಕು ಎಂದು ಎಕ್ಸ್ (ಟ್ವಿಟ್ಟರ್) ವೇದಿಕೆಯಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.