ನ್ಯೂಸ್

ಪ್ರಧಾನಿ ಮೋದಿ ಮಾಡಿದ್ದು ಸರೀನಾ ಎಂದು ಜನರ ಬಳಿ ನ್ಯಾಯ ಕೇಳಿದ ರಾಹುಲ್​ ಗಾಂಧಿ

ನವದೆಹಲಿ: ಪ್ರಧಾನಿ, ರಾಷ್ಟ್ರಪತಿ-ಉಪರಾಷ್ಟ್ರಪತಿಗಳ ಪ್ರಯಾಣಕ್ಕೆಂದು 8,400 ಕೋಟಿ ರೂ.ವೆಚ್ಚದಲ್ಲಿ ವಿವಿಐಪಿ ಏರ್​​ಕ್ರಾಫ್ಟ್​​ ಖರೀದಿ ಮಾಡಿದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.

ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನಮ್ಮ ಸೈನಿಕರ ಪ್ರಯಾಣಕ್ಕೆ ಬುಲೆಟ್​ ಪ್ರೂಫ್​ ಇಲ್ಲದ ಟ್ರಕ್​​ ನೀಡಲಾಗಿದೆ. ಇದೇ ಕಾರಣಕ್ಕೆ ಎಷ್ಟೋ ಯೋಧರು ಹುತಾತ್ಮರಾಗಿದ್ದಾರೆ. ಇತ್ತ ಪ್ರಧಾನಿ ತಮ್ಮ ಪ್ರಯಾಣಕ್ಕೆ 8,400 ಕೋಟಿ ರೂ.ಮೌಲ್ಯದ ​ ವಿಮಾನಗಳನ್ನು ಬಳಸಲು ಮುಂದಾಗಿದ್ದಾರೆ. ಇದು ನ್ಯಾಯನಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಅನ್ಯಧರ್ಮದ ತರುಣಿಯೊಂದಿಗೆ ಸಂಬಂಧ: ತೀವ್ರ ಥಳಿತಕ್ಕೊಳಗಾಗಿ ವಿದ್ಯಾರ್ಥಿ ಸಾವು, ಅಪ್ರಾಪ್ತರ ಬಂಧನ

ಅಮೆರಿಕ ಅಧ್ಯಕ್ಷರು ಬಳಸುವ 'ಏರ್​ಫೋರ್ಸ್ ಒನ್' ವಿಮಾನ ಮಾದರಿಯಲ್ಲೇ ತಯಾರಿತವಾದ 'ಏರ್ ಇಂಡಿಯಾ ಒನ್' ವಿಮಾನಗಳ ವಿಚಾರದಲ್ಲಿ ಕಳೆದ ವಾರವೂ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಒಂದು ಕಡೆ ನಮ್ಮ ಸೈನಿಕರು ಚೀನಾದಿಂದ ನಮ್ಮ ಗಡಿ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ ಇನ್ನೊಂದೆಡೆ ಪ್ರಧಾನಿ 8000 ಕೋಟಿ ರೂ.ವೆಚ್ಚದಲ್ಲಿ ಎರಡು ವಿಮಾನ ಖರೀದಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ( ಏಜೆನ್ಸೀಸ್​)