ನವದೆಹಲಿ: 'ಮೇಕ್ ಇನ್ ಇಂಡಿಯಾ' ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಯೋಜನೆ ವಿಫಲವಾಗಿದೆ ಎಂದು ಹೇಳಿದ್ದು, ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸದೆ ಬಿಡಿಭಾಗಗಳನ್ನು ಜೋಡಿಸುವುದರಿಂದ ಚೀನಾಕ್ಕೆ ಮಾತ್ರ ಲಾಭವಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ:ಮಾರುಕಟ್ಟೆಯ ಹೊಸ ಟ್ರೆಂಡ್ ಬಗ್ಗೆ ಪ್ರೇಮಾನಂದ ಮಹಾರಾಜ್ ಎಚ್ಚರಿಕೆ! ಯುವಜನತೆಗೆ ಕಿವಿಮಾತು | Premanand Maharaj
ಪ್ರಧಾನಿ ನರೇಂದ್ರ ಮೋದಿ ಘೋಷಣೆಗಳ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆಯೆ ಹೊರತು, ಯಾವುದೇ ಪರಿಹಾರಗಳನ್ನು ನೀಡುವುದಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಹೊರತಾಗಿಯೂ ಭಾರತದ ಉತ್ಪಾದನೆ ದಾಖಲೆಯ ಕೆಳಮಟ್ಟದಲ್ಲಿದೆ ಎಂದು ಬೇಸರ ಹೊರಹಾಕಿದ್ದಾರೆ.
ಇನ್ನೂ ಈ ಬಗ್ಗೆ ಎಕ್ಸ್‌ನಲ್ಲಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ‘ಮೇಕ್ ಇನ್ ಇಂಡಿಯಾ’ ಭಾರಿ ಭರವಸೆ ನೀಡಿತು. ಹಾಗಾದರೆ ಉತ್ಪಾದನೆಯು ದಾಖಲೆ ಮಟ್ಟದಲ್ಲಿ ಕನಿಷ್ಠವಾಗಿರುವುದು ಏಕೆ, ಯುವಜನರ ನಿರುದ್ಯೋಗ ದಾಖಲೆ ಮಟ್ಟದಲ್ಲಿ ಇರುವುದು ಏಕೆ ಮತ್ತು ಚೀನಾದಿಂದ ಆಮದು ದುಪ್ಪಟ್ಟಾಗಿದ್ದು ಏಕೆ, ಮೋದಿ ಅವರು ಘೋಷಣೆಗಳ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆಯೆ ಹೊರತು ಪರಿಹಾರಗಳಲ್ಲ. 2014 ರಿಂದ, ಉತ್ಪಾದನೆಯು ನಮ್ಮ ಆರ್ಥಿಕತೆಯ ಶೇಕಡಾ 14 ಕ್ಕೆ ಇಳಿದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾವು ಇತರರಿಗೆ ಮಾರುಕಟ್ಟೆ ಆಗುವುದನ್ನು ನಿಲ್ಲಿಸಬೇಕು. ನಾವು ನಮ್ಮಲ್ಲಿಯೇ ವಸ್ತುಗಳನ್ನು ನಿರ್ಮಿಸುವವರೆಗೂ ಖರೀದಿಸುತ್ತಲೇ ಇರುತ್ತೇವೆ ಎಂದಿದ್ದಾರೆ. ರಾಹುಲ್ ಗಾಂಧಿ ಅವರು ದೆಹಲಿಯ ನೆಹರೂ ಪ್ಲೇಸ್‌ನಲ್ಲಿ ಮೊಬೈಲ್ ರಿಪೇರಿ ತಂತ್ರಜ್ಞರನ್ನು ಭೇಟಿಯಾಗಿ ಅಲ್ಲಿ ಅವರೊಂದಿಗೆ ನಡೆಸಿದ ಸಂಭಾಷಣೆಯ ವೀಡಿಯೊವನ್ನು ಸಹ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೂ ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನಾಯಕನ ಹೇಳಿಕೆಗಳು ದಾರಿತಪ್ಪಿಸುವಂತಿವೆ ಮತ್ತು ಸರ್ಕಾರದ ದತ್ತಾಂಶ ಹಾಗೂ ಮೇಕ್ ಇನ್ ಇಂಡಿಯಾ ಮತ್ತು ಪಿಎಲ್ಐ ಉಪಕ್ರಮಗಳ ಅಡಿಯಲ್ಲಿ ಸಾಧನೆಗಳೊಂದಿಗೆ ಅವುಗಳನ್ನು ಎದುರಿಸಿದ್ದಾರೆ ಎಂದು ಹೇಳಿದರು.
(ಏಜೆನ್ಸೀಸ್)
ಮೋದಿಯವರ 'ಮೇಕ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ ಉತ್ಪಾದನೆ ಕುಸಿಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಪುರಾಣಗಳನ್ನು ಸತ್ಯಗಳೊಂದಿಗೆ ಭೇದಿಸೋಣ ಎಂದು ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.