ನ್ಯೂಸ್

ಆಗಸ್ಟ್ 4ರಂದು ಬೆಂಗಳೂರಿನಲ್ಲಿ ಚುನಾವಣೆ ಆಯೋಗದ ವಿರುದ್ಧ ರಾಹುಲ್ ಗಾಂಧಿ ಹೋರಾಟ|Rahul Gandhi

Rahul Gandhi: ದೇಶದ ಲೋಕಸಭಾ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮತಗಳ್ಳತನ ನಡೆಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಸ್ಟ್ 4ರಂದು ಬೆಂಗಳೂರಿನಲ್ಲಿ ಚುನಾವಣೆ ಆಯೋಗದ ವಿರುದ್ಧ ಹೋರಾಟ ನಡೆಸಲಿದ್ದಾರೆ ಎಂದು ಎನ್ನಲಾಗಿದೆ.

ಬೆಂಗಳೂರಿನ ಮಹಾದೇವಪುರ ಕ್ಷೇತ್ರದಿಂದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿವರೆಗೂ ರಾಹುಲ್ ಗಾಂಧಿ ಪಾದಯಾತ್ರೆ ನಡೆಸಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಸಾಥ್ ನೀಡಲಿದ್ದಾರೆ.

2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೆ ಆಯೋಗ ಬಿಜೆಪಿ ಜೊತೆ ಸೇರಿ ಚುನಾವಣಾ ಅಕ್ರಮ ನಡೆಸಿದೆ ಎಂದು ಆರೋಪಿಸಿದ್ದರು. ಚುನಾವಣೆ ಆಯೋಗ ಮತದಾರರ ದಾಖಲೆ ಕೇಳಿದ್ರೆ ಕೊಡಲಿಲ್ಲ, ಅವುಗಳನ್ನ ನಾಶ ಮಾಡಿದೆ ಎಂದು ಹೇಳಿದ್ದರು.

ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಹೋರಾಟಕ್ಕೆ ಕಾರಣವೇನು?

ಇತ್ತೀಚೆಗೆ ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಬಿಹಾರದಲ್ಲೂ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿ ಆರೋಪಿಸಿದ್ದರು. ಜೊತೆಗೆ ಈ ಬಗ್ಗೆ ದೆಹಲ್ಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದರು.

ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಅಕ್ರಮ ನಡೆದಿದ್ದು, ಮತಗಳ್ಳತನ ನಡೆದಿದೆ. ನಾವು ಒಂದು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿದ್ದು ಚುನಾವಣಾ ಆಯೋಗದ ಮೋಸದಾಟ ಬಯಲಾಗಿದೆ. ಈ ಬಗ್ಗೆ ನಾನು ಬ್ಲಾಕ್ ಅಂಡ್ ವೈಟ್​ನಲ್ಲಿ ಬರೆದು ಕೊಡುವೆ ಎಂದು ಸವಾಲು ಹಾಕಿದ್ದರು.

ರಾಹುಲ್ ಗಾಂಧಿ ಹೇಳಿದ ಆ ಒಂದು ಕ್ಷೇತ್ರ ಬೆಂಗಳೂರ ಸೆಂಟ್ರಲ್ ಕ್ಷೇತ್ರ ಎನ್ನಲಾಗಿದೆ.  ಸದ್ಯ ಲೋಕಸಭಾ ಸದಸ್ಯರಾಗಿ ಬಿಜೆಪಿಯ ಪಿ.ಸಿ.ಮೋಹನ್ ಗೆದ್ದಿದ್ದಾರೆ. ಕಾಂಗ್ರೆಸ್​ನಿಂದ ಮನ್ಸೂರ್ ಅಲಿ ಖಾನ್ ಅಭ್ಯರ್ಥಿಯಾಗಿದ್ದರು. ಫಲಿತಾಂಶದ ದಿನ ಆರಂಭದಿಂದಲೂ ಮನ್ಸೂಲ್ ಅಲಿ ಖಾನ್ ಮುನ್ನಡೆ ಸಾಧಿಸುತ್ತಾ ಬಂದಿದ್ದರು.

ಮನ್ಸೂರ್ ಅಲಿ ಖಾನ್ 83,381 ಮತಗಳ ಲೀಡ್ ಪಡೆದಿದ್ದರು. ಉತ್ತಮ ಲೀಡ್ ಹಿನ್ನೆಲೆಯಲ್ಲಿ ಗೆಲುವು ನಿಶ್ಚಿತ ಎಂದು ಭಾವಿಸಿದ ಕಾಂಗ್ರೆಸ್ ಬೆಂಬಲಿಗರು ಮತ ಎಣಿಕೆ ಕೇಂದ್ರದ ಎದುರು ಸಂಭ್ರಮಾಚರಣೆ ಆರಂಬಿಸಿದ್ದರು. ಆದರೆ ಕೊನೆ ಸುತ್ತಿನಲ್ಲಿ ಸಿವಿ ರಾಮನ್ ನಗರ, ಗಾಂಧಿನಗರ ಮತ್ತು ಮಹದೇವಪುರದಲ್ಲಿ 35,000-40,000 ಮತಗಳ ಅಂತರದಿಂದ ರೋಚಕ ತಿರುವು ಪಡೆದು ಗೆಲುವು ಸಾಧಿಸಿದ್ದರು.

ಈಗ ಮಹಾದೇವಪುರ ಕ್ಷೇತ್ರದಲ್ಲೇ ಮತಗಳ್ಳನ ನಡೆದಿದೆ ಎಂದು ಅಂದಾಜಿಸಲಾಗಿದ್ದು ಅಲ್ಲಿಂದಲೇ ರಾಹುಲ್ ಗಾಂಧಿ ಹೋರಾಟ ಪ್ರಾರಂಭಿಸಲಿದ್ದು, ಪಾದಯಾತ್ರೆ ಮಾಡುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)