ನ್ಯೂಸ್

ಭಾರತ್​ ಜೋಡೋ ಯಾತ್ರೆಗೆ ದೀಪಾವಳಿ ಬ್ರೇಕ್: ತೆಲಂಗಾಣದಿಂದ ದೆಹಲಿಗೆ ತೆರಳಿದ ರಾಹುಲ್ ಗಾಂಧಿ

ರಾಯಚೂರು: ದೀಪಾವಳಿ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆಗೆ ಮೂರು ದಿನ ವಿರಾಮ ನೀಡಿದ್ದು, ಕಾಂಗ್ರೆಸ್​ ನಾಯಕ ಹಾಗೂ ವಯನಾಡು ಸಂಸದ ರಾಹುಲ್ ಗಾಂಧಿ ಅವರು ದೆಹಲಿಗೆ ತೆರಳಿದರು.

ಇಂದು ಮುಂಜಾನೆ ರಾಯಚೂರಿನ ಯರಮರಸ್ ಮೂಲಕ ತೆಲಂಗಾಣಕ್ಕೆ ಪ್ರವೇಶ ನೀಡಿದ ರಾಹುಲ್ ಗಾಂಧಿ, ಬಳಿಕ ಹೆಲಿಕ್ಯಾಪ್ಟರ್ ಮೂಲಕ ಹೈದ್ರಾಬಾದ್‌ಗೆ ಪ್ರಯಾಣ ಬೆಳೆಸಿದರು.

ಹೊರಡುವ ಮುನ್ನ ಡಿ.ಕೆ.ಶಿವಕುಮಾರ್ ಅವರನ್ನು ಆಲಂಗಿಸಿದ ರಾಹುಲ್, ಯಾತ್ರೆಯ ಯಶಸ್ಸಿಗೆ ದುಡಿದಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ದೀಪಾವಳಿ ಮುಗಿದ ಬಳಿಕ ಮತ್ತೆ ತೆಲಂಗಾಣದಿಂದಲೇ ರಾಹುಲ್​ ಯಾತ್ರೆ ಮುಂದುವರಿಸಲಿದ್ದಾರೆ.