ನ್ಯೂಸ್

ಲೋಕಸಭೆ ಚುನಾವಣೆ ಗೆಲ್ಲಲು ರಾಜ್ಯದ ಕೈ ನಾಯಕರಿಗೆ ರಾಹುಲ್ ಬುದ್ಧಿಮಾತು

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದೆ ಹಾಗೆಂದು ಅಧಿಕಾರ ನಮ್ಮ ಬಳಿ ಇದೆ, ಲೋಕಸಭೆ ಕೂಡ ಸುಲಭ ಎಂದು ಭಾವಿಸಬೇಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯ ನಾಯಕರನ್ನು ಎಚ್ಚರಿಸಿದ್ದಾರೆ.

ಲೋಕಸಭೆ ಚುನಾವಣೆ ಪೂರ್ವ ತಯಾರಿಗಾಗಿ ದೆಹಲಿಯಲ್ಲಿ ಆಯೋಜನೆಗೊಂಡಿದ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ಅನೇಕ ಎಚ್ಚರಿಕೆ ಸಂದೇಶವನ್ನು ರಾಹುಲ್ ಗಾಂಧಿ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯ ಬಿಜೆಪಿ ಸರ್ಕಾರ ವೈಫಲ್ಯದಿಂದ ಜನ ಅವರಿಗೆ ಮತ ನೀಡಿಲ್ಲ. ಆದರೆ, ಲೋಕಸಭೆ ಚುನಾವಣೆ ಚಿತ್ರಣ ಬೇರೆಯದೇ ಇರುತ್ತದೆ. ಮೋದಿ ್ಯಾಕ್ಟರ್ ಇಲ್ಲಿ ಪ್ರಮುಖವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರದ ವೈಫಲ್ಯ ದ ಬಗ್ಗೆಯೂ ಸಹ ಗಮವಿರಲಿ, ಅದನ್ನೇ ಪ್ರಚಾರ ಮಾಡಿ ಎಂದು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಲೋಕಸಭಾ ಚುನಾವಣೆಗೆಂದೇ ರಣತಂತ್ರ ರೂಪಿಸಬೇಕು. ವಿಧಾನಸಭೆ ಚುನಾವಣೆಯಲ್ಲಿ ಗೆದ್ದಂತೆ ಲೋಕಸಭೆಯನ್ನು ಸಹ ಗೆಲ್ಲಿಸಿಕೊಂಡು ಬರಬೇಕು. ಗ್ಯಾರಂಟಿ ಯೋಜನೆಗಳು ಎಷ್ಟರ ಮಟ್ಟಿಗೆ ಜನರನ್ನು ತಲುಪಿವೆ ಎಂಬುದನ್ನು ಪರಿಶೀಲಿಸಿ, ಇದರ ಫಲಾನುಭವಿಗಳ ಜಿಲ್ಲಾವಾರು ಸಭೆ ಮಾಡಿ,

ಸಾಮಾಜಿಕ ಜಾಲತಾಣಗಳನ್ನು ಮತ್ತಷ್ಟು ಸದೃಢಗೊಳಿಸಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.