ನ್ಯೂಸ್

'ರಾಗಿಣಿ..ಸಿಂಹಿಣಿ ಇದ್ದ ಹಾಗೆ..ಎಲ್ಲವನ್ನೂ ಗೆದ್ದು ಬರುತ್ತಾಳೆ'

lakshmihegde

ಬೆಂಗಳೂರು: ಜೈಲುಪಾಲಾಗಿರುವ ನಟಿ ರಾಗಿಣಿಗೆ ಅನಾರೋಗ್ಯ ಕಾಡುತ್ತಿದೆ ಎಂದು ಮಾಧ್ಯಮಗಳಲ್ಲಿ ಬಂದ ವರದಿಯನ್ನು ನೋಡಿ ಅವರನ್ನು ನೋಡಲು ಪೋಷಕರು ಆಗಮಿಸಿದ್ದರು. ಈ ವೇಳೆ ಮಾತನಾಡಿಸಲು ಹೋದ ಮಾಧ್ಯಮದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮೊನ್ನೆಮೊನ್ನೆಯವರೆಗೂ ನಮ್ಮ ಮಗಳೊಂದಿಗೆ ಇದ್ದವರೆಲ್ಲ ಇಂದು ಜತೆಗಿಲ್ಲ. ನಮ್ಮ ಮಗಳ ಹೆಸರು ಹೇಳಿ ತಪ್ಪು ಮಾಡಿದ್ದಾರೆ. ನಮಗೆ ಖಂಡಿತವಾಗಿಯೂ ನ್ಯಾಯ ಸಿಗುವ ಭರವಸೆ ಇದೆ ಎಂದು ಹೇಳಿದ್ದಾರೆ.

ನನ್ನ ಮಗಳು ಸಿಂಹಿಣಿ ಇದ್ದ ಹಾಗೆ. ಅವಳು ಹೆದರುವುದಿಲ್ಲ. ಎಲ್ಲವನ್ನೂ ಗೆದ್ದು ಬರುತ್ತಾಳೆ. ನಮಗೆ ಮೂರು ಫ್ಲಾಟ್​​ಗಳು ಇವೆ ಎಂಬುದೆಲ್ಲ ಸುಳ್ಳು. ನಮಗಿರುವುದೇ ಒಂದು ಫ್ಲಾಟ್​. ಅದನ್ನು ಮಾರಿ ನನ್ನ ಮಗಳನ್ನು ವಾಪಸ್​ ಕರೆತರುತ್ತೇವೆ. ಅವಳಿಗಾಗಿ ನಮ್ಮನ್ನು ನಾವು ಮಾರಿಕೊಳ್ಳಲೂ ಸಿದ್ಧರಿದ್ದೇವೆ. ಕನ್ನಡ ಚಿತ್ರೋದ್ಯಮಕ್ಕೆ 10 ವರ್ಷದಿಂದಲೂ ಸೇವೆ ಸಲ್ಲಿಸಿದ್ದಾಳೆ. ಸದ್ಯಕ್ಕಂತೂ ತುಂಬ ನೋವಿನಲ್ಲಿ ಇದ್ದೇವೆ ಎಂದು ರಾಗಿಣಿಯವರ ತಾಯಿ ರೋಹಿಣಿ ದ್ವಿವೇದಿ ದುಃಖ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಈ ಫೋಟೋ ನೋಡಿ ಸುಧಾಮೂರ್ತಿ ತರಕಾರಿ ಮಾರುತ್ತಿದ್ದಾರೆ ಎಂದುಕೊಂಡರೆ ತಪ್ಪು; ಸತ್ಯ ಬೇರೇನೆ ಇದೆ

ರಾಗಿಣಿ ಹೆಸರು ಮಾಡಿದ್ದಾಳೆ ಎಂಬ ಕಾರಣಕ್ಕೆ ಇಷ್ಟೆಲ್ಲ ನಡೆಯುತ್ತಿದೆ. ತುಂಬ ಕಷ್ಟಪಟ್ಟು ಮೇಲೆ ಬಂದವಳು ಅವಳು. ರಾಜಕಾರಣಿಗಳು, ಪೊಲೀಸರು ಯಾರಿಗೂ ನನ್ನ ಮಗಳ ಸಂಪರ್ಕ ಇಲ್ಲ. 5 ತಿಂಗಳಿಂದ ಕರೊನಾ ಸಂದರ್ಭದಲ್ಲೂ ಸಾಕಷ್ಟು ಸೇವೆ ಮಾಡಿದ್ದಾಳೆ. ಈಗ ಯಾರ ಹೆಸರನ್ನೂ ಹೇಳುವುದಿಲ್ಲ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇವೆ ಎಂದು ಹೇಳಿದ್ದಾರೆ.(ದಿಗ್ವಿಜಯ ನ್ಯೂಸ್​)