ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಅರೆಸ್ಟ್ ಆಗಿರುವ ನಟಿ ರಾಗಿಣಿ ದ್ವಿವೇದಿಯನ್ನು ಮತ್ತೆ 5 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿದೆ. ಇದರ ಬೆನ್ನಲ್ಲೇ ರಾಗಿಣಿ ದ್ವಿವೇದಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್ ಪಡದಿದ್ದಾರೆ.
ನಿರೀಕ್ಷಣಾ ಜಾಮೀನು ಅರ್ಜಿಯನ್ನು ರಾಗಿಣಿ ಬಂಧನಕ್ಕೂ ಮೊದಲೇ ಸಲ್ಲಿಸಲಾಗಿತ್ತು. ಆದರೆ ರಾಗಿಣಿ ಈಗಾಗಲೇ ಬಂಧನವಾಗಿರುವ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ನಿಂದ ಹಿಂಪಡೆದಿದ್ದಾರೆ.
ರಾಗಿಣಿ ತಂದೆ ಕರ್ನಲ್ ರಾಕೇಶ್ ದ್ವಿವೇದಿ ಅವರು ಅರ್ಜಿ ವಾಪಸ್ ಪಡೆಯಲು ಹೇಳಿದ್ದರಿಂದ ಹಿಂಪಡೆಯಲಾಗಿದೆ. ಮುಂಬೈನಿಂದ ಬೇರೆ ವಕೀಲರು ಬರುತ್ತಾರೆ ಎಂದು ರಾಗಿಣಿ ಪರ ವಕೀಲ ಸುದರ್ಶನ್ ದ್ವಿವೇದಿ ತಿಳಿಸಿದ್ದಾರೆ.