ನ್ಯೂಸ್

ರಾಘವೇಂದ್ರ-ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್ ಬಿಡುಗಡೆ, ಸಸ್ಪೆನ್ಸ್ ಥ್ರಿಲ್ಲಿಂಗ್ ಅಂಶಗಳ ಝಲಕ್

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ನಟನೆಯ ಮರೀಚಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್​​ ಸಸ್ಪೆನ್ಸ್ ಥ್ರಿಲ್ಲಿಂಗ್ ಅಂಶಗಳ ಝಲಕ್ ಕುತೂಹಲ ಹೆಚ್ಚಿಸಿದೆ. ಪೊಲೀಸ್ ಖದರ್ ನಲ್ಲಿ ರಾಘು ಕಾಣಿಸಿಕೊಂಡಿದ್ದಾರೆ. ಟೀಸರ್ ಬಗ್ಗೆ ಚಿತ್ರತಂಡ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ.


ನಿರ್ದೇಶಕ ಕಂ ನಿರ್ಮಾಪಕ ಸಿದ್ಧ್ರುವ್ ಮಾತನಾಡಿ, ಮರೀಚಿ ಎಂದರೆ ಬ್ರಹ್ಮನ ಮಗ. ಮರೀಚಿ ಟೈಟಲ್ ಇಡುವ ಮೊದಲು 150 ಟೈಟಲ್ ನಮ್ಮ ಮುಂದೆ ಇತ್ತು. ಅದರಲ್ಲಿ ಋಷಿ ಹೆಸರು ಇಡುವ ಟೈಟಲ್ ಆಯ್ಕೆ ಮಾಡಬೇಕಿತ್ತು. ಅದಕ್ಕೆ ಮರೀಚಿ ಆಯ್ಕೆ ಮಾಡಿದ್ದೇನೆ.


ತುಂಬಾ ಅದ್ಭುತವಾಗಿ ಕಥೆ ಮೂಡಿ ಬಂದಿದೆ. ಒಂದೊಳ್ಳೆ ಪ್ರಯತ್ನ ಮಾಡಿದ್ದೇವೆ. ಸ್ಕ್ರೀನ್ ಪ್ಲೇ, ಸ್ಟೋರಿ ಎಲ್ಲವೂ ಚೆನ್ನಾಗಿ ಬಂದಿದೆ ಎಂದರು. ನಟಿ ಸೋನುಗೌಡ ಮಾತನಾಡಿ, ಮರೀಚಿ ಸ್ಟೋರಿ ಲೈನ್ ನನಗೆ ಬಹಳ ಇಷ್ಟವಾಯಿತು. ಈ ಚಿತ್ರದಲ್ಲಿ ಫಾರ್ಪಮೆನ್ಸ್ ಗೆ ತುಂಬಾ ಸ್ಕೋಪ್ ಇತ್ತು. ನನ್ನ ಪಾತ್ರ ತುಂಬಾ ಚೆನ್ನಾಗಿ ಬಂದಿದೆ. ಹ್ಯಾಪಿ ನ್ಯೂ ಇಯರ್ ನಲ್ಲಿ ಗಂಡ ಹೆಂಡತಿಯಾಗಿ ನಾನು ವಿಜಯ್ ಸರ್ ನಟಿಸಿದ್ದೇವು.


ಇಲ್ಲಿಯೂ ಗಂಡ ಹೆಂಡತಿಯಾಗಿ ನಟಿಸಿದ್ದೇವೆ. ಎಮೋಷನಲ್ ಆಗಿ ಮರೀಚಿ ಸಿನಿಮಾ ಮೂಡಿಬಂದಿದೆ. ಸ್ಕ್ರೀನ್ ನಲ್ಲಿ ನಾವು ಹೇಗೆ ಕಾಣಿಸುತ್ತೇವೆ ಎಂಬುದನ್ನು ನೋಡಲು ನಾನು ಕೂಡ ಕಾತುರಳಾಗಿದ್ದೇನೆ ಎಂದರು.

ಈ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡುವ ಅವಕಾಶವನ್ನು ನಿರ್ದೇಶಕರು ಕೊಟ್ಟಿದ್ದಾರೆ. ಮರೀಚಿ ಸಿನಿಮಾದಲ್ಲಿ ತಾಂತ್ರಿಕ ವರ್ಗದವರನ್ನು ಎಷ್ಟು ಜವಾಬ್ದಾರಿಯಿಂದ ಆಯ್ಕೆ ಮಾಡಿದ್ದರೋ ಅದೇ ರೀತಿ ತೆರೆಮೇಲೆ ಬರುವ ಕಲಾವಿದರನ್ನು ಅಷ್ಟೇ ಜವಾಬ್ದಾರಿಯಿಂದ ಆಯ್ಕೆ ಮಾಡಿದ್ದಾರೆ. ಅದರಲ್ಲಿ ನಾನು ಒಬ್ಬ ಇದ್ದೇನೆ ಎಂದು ಹೇಳಲು ಖುಷಿಯಾಗುತ್ತೆ ಎಂದು ರಾಘವೇಂದ್ರ ಹೇಳಿದ್ದಾರೆ.