ರಾಜಾ ಶಿವಾಜಿ ಚಿತ್ರದ ಪೋಸ್ಟರ್ 
ನ್ಯೂಸ್

‘ರಾಜಾ ಶಿವಾಜಿ’ ಆರ್ಭಟ : ಗಳಿಕೆಯಲ್ಲಿ ಮೈಲಿಗಲ್ಲು ಸಾಧಿಸುತ್ತಿರುವ ಮರಾಠಿ ಚಿತ್ರ

ಪ್ರಮುಖ ಮುಖ್ಯಾಂಶಗಳು

  • 11ನೇ ದಿನಕ್ಕೆ 75 ಕೋಟಿ ಗಳಿಕೆ ಮಾಡಿದ ಮರಾಠಿ ಚಿತ್ರ
  • ಮರಾಠಿ ಚಿತ್ರರಂಗದಲ್ಲಿ ರಿತೇಶ್​ ದೇಶಮುಖ್ ಅಮೋಘ ಸಾಧನೆ
  • 100 ಕೋಟಿ ರೂ. ಕ್ಲಬ್​ ಸೇರುವತ್ತ ದಾಪುಗಾಲಿಡುತ್ತಿರುವ ರಾಜಾ ಶಿವಾಜಿ
ರಿತೇಶ್ ದೇಶಮುಖ್ ನಟಿಸಿ, ನಿರ್ದೇಶಿಸಿದ್ದ ‘ರಾಜಾ ಶಿವಾಜಿ’ ಚಿತ್ರವು ಕಳೆದ ಮೇ 1ರಂದು ರಿಲೀಸ್ ಆಗಿತ್ತು. ಮರಾಠ ಸಾಮ್ರಾಜ್ಯದ ಅಧಿಪತಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತ ಬಯೋಪಿಕ್ ಇದಾಗಿದ್ದು, ಮರಾಠಿ ಮತ್ತು ಹಿಂದಿಯಲ್ಲಿ ಸಿನಿಮಾ ಮೂಡಿಬಂದಿದೆ. ರಿಲೀಸ್ ಆದ ಮೊದಲ ದಿನದಿಂದಲೂ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ರಿತೇಶ್ ದೇಶಮುಖ್ ನಟನೆ ಹಾಗೂ ನಿರ್ದೇಶನಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಇದೀಗ ಬಾಕ್ಸಾಫೀಸ್‌ನಲ್ಲೂ ಸಿನಿಮಾ ಸದ್ದು ಮಾಡುತ್ತಿದ್ದು, ಮರಾಠಿ ಚಿತ್ರರಂಗದ ಪೈಕಿ ಗಳಿಕೆಯಲ್ಲಿ ಸಾಧನೆ ಮಾಡಿದೆ. ರಿಲೀಸ್ ಆದ 11 ದಿನಕ್ಕೆ ‘ರಾಜಾ ಶಿವಾಜಿ’ ಚಿತ್ರವು 75 ಕೋಟಿ ರೂ. ಅಧಿಕ ಗಳಿಕೆ ಮಾಡಿದೆ. ಈ ಮೂಲಕ ಅತಿಹೆಚ್ಚು ಕಲೆಕ್ಷನ್ ಮಾಡಿದ ಮೂರನೇ ಮರಾಠಿ ಸಿನಿಮಾ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಇನ್ನು ನಾಗರಾಜ್ ಮಂಜುಳೆ ನಿರ್ದೇಶನದ ‘ಸೈರಾಟ್’ (110 ಕೋಟಿ ರೂ.) ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ‘ಬೈಪನ್ ಭಾರಿ ದೇವ’ (92 ಕೋಟಿ ರೂ.) ಇದ್ದು, ಮೂರನೇ ಸ್ಥಾನದಲ್ಲಿ ರಾಜಾ ಶಿವಾಜಿ (75 ಕೋಟಿ ರೂ.) ಚಿತ್ರವಿದೆ. ಇನ್ನು ‘ರಾಜಾ ಶಿವಾಜಿ’ ಆರ್ಭಟ ಹೀಗೆ ಮುಂದುವರಿದರೆ, ಮುಂದಿನ ಕೆಲವೇ ದಿನಗಳಲ್ಲಿ 100 ಕೋಟಿ ರೂ. ಕ್ಲಬ್ ಸೇರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಿಲೀಸ್ ಮೊದಲ ವಾರದಲ್ಲಿ 50 ಕೋಟಿ ರೂ. ಗಳಿಕೆ ಮಾಡುವ ಮೂಲಕ, ಈ ಸಾಧನೆ ಮಾಡಿದ ಮೊದಲ ಮರಾಠಿ ಚಿತ್ರ ಇದಾಗಿದೆ. ರಿತೇಶ್ ಜತೆಗೆ ಸಂಜಯ್ ದತ್, ಜೆನಿಲಿಯಾ ಡಿ’ಸೋಜಾ. ವಿದ್ಯಾ ಬಾಲನ್, ಮಹೇಶ್ ಮಂಜ್ರೇಕರ್ ಕಲಾಬಳಗದಲ್ಲಿದ್ದು, ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. -ಏಜೆನ್ಸೀಸ್