ನ್ಯೂಸ್

ಜಗಳ ಬಿಡಿಸಲು ಹೋದ ಅಮಾಯಕ ಯುವಕನ ಕೊಲೆ: ಸಾವಿಗೆ ಕಾರಣವಾಯ್ತು ಗೋವಾ ಲಾಕ್​​ಡೌನ್!​

ಉತ್ತರಕನ್ನಡ: ಜಗಳ ಬಿಡಿಸಲು ಹೋದ ಯುವಕ ಕೊಲೆಯಾಗಿರುವ ಅಮಾನವೀಯ ಘಟನೆ ದಾಂಡೇಲಿಯ ಗಾಂಧಿನಗರದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ‌ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ.

ಸಂದೀಪ ಪ್ರಕಾಶ ಪಾಟೀಲ್ (22) ಕೊಲೆಯಾದ ಯುವಕ. ಮೃತನ ಸಹೋದರ ಮನೋಜ ಪಾಟೀಲ್ ಮೇಲೆ ಫಾರೂಕ್,‌‌ ಕಾರ್ತಿ ಸೇರಿ ಇತರರು ಕ್ಷುಲ್ಲಕ ಕಾರಣಕ್ಕೆ ಜಗಳಕ್ಕೆ ಇಳಿದಿದ್ದರು. ಅಲ್ಲದೆ, ಮನೋಜ್​ ಮೇಲೆ ಹಲ್ಲೆಯನ್ನು ಮಾಡಿದ್ದಾರೆ.

ಈ ವೇಳೆ ಹಲ್ಲೆ ತಪ್ಪಿಸಲು ಹೋಗಿದಕ್ಕೆ ಸಂದೀಪ್​ನನ್ನು ಹೊಡೆದು ಚಾಕು ಇರಿದು​ ಕೊಲೆ ಮಾಡಲಾಗಿದೆ. ಈ ಸಂಬಂಧ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕೊಲೆಯಾದ ಸಂದೀಪ್​ ಗೋವಾದಲ್ಲಿ ಉದ್ಯೋಗಿಯಾಗಿದ್ದ. ಲಾಕ್​ಡೌನ್ ಹಿನ್ನಲೆಯಲ್ಲಿ ಊರಿಗೆ ಬಂದಿದ್ದ. ಒಂದು ವೇಳೆ ಲಾಕ್​ಡೌನ್​ ಇರದೇ ಹೋಗಿದ್ದರೆ ಸಂದೀಪ್​ ಪ್ರಾಣ ಉಳಿಯುತ್ತಿತ್ತು ಎಂದು ಗೋಳಿಡುತ್ತಾ ಕುಟುಂಬಸ್ಥರು ಕಣ್ಣೀರಾಕಿದ್ದಾರೆ. ಯಾರದೋ ತಪ್ಪಿಗೆ ಅಮಾಯಕ ಸಂದೀಪ್ ಬಲಿಯಾಗಿದ್ದಾನೆ. (ದಿಗ್ವಿಜಯ ನ್ಯೂಸ್​)​