ಲಖನೌ: ಉತ್ತರ ಪ್ರದೇಶ ಚುನಾವಣೆಯ ಮತಎಣಿಕೆಯ ಸದ್ಯದ ಟ್ರೆಂಡ್ ಪ್ರಕಾರ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿ ಭರ್ಜರಿ ಮುನ್ನಡೆ ಸಾಧಿಸಿದ್ದು, ಆರಂಭಿಕ ಟ್ರೆಂಡ್ ಅಧಿಕೃತವಲ್ಲ ಎಂದು ಸಮಾಜವಾಗಿ ಪಕ್ಷ ತಿಳಿಸಿದೆ.
ಮತಎಣಿಕೆ ಮುಗಿಯುವವರೆಗೂ ಸ್ಥಳೀಯ ಚುನಾವಣಾ ಕಚೇರಿಯಲ್ಲೇ ಉಳಿಯುವಂತೆ ಪಕ್ಷದ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ. ಬಿಜೆಪಿ ಗೆದ್ದಿದೆ ಎಂದು ಬಿಂಬಿಸಲು ಆರಂಭಿಕ ಟ್ರೆಂಡ್ ಅನ್ನು ಸೃಷ್ಟಿ ಮಾಡಲಾಗಿದೆ. ಆರಂಭಿಕ ಟ್ರೆಂಡ್ ಅಧಿಕೃತವಲ್ಲ. ಕಾರ್ಯಕರ್ತರ ಉತ್ಸಾಹವನ್ನು ತಗ್ಗಿಸಿ 3 ಗಂಟೆಯ ಬಳಿಕ ಫಲಿತಾಂಶವನ್ನು ತಿರುಚಲು ಬಹುದು. ಹೀಗಾಗಿ ಚುನಾವಣಾ ಕಚೇರಿಯಲ್ಲೇ ಕೊನೆಯವರೆಗೂ ಉಳಿಯಿರಿ ಎಂದು ಕಾರ್ಯಕರ್ತರಿಗೆ ಸಮಾಜವಾದಿ ಪಕ್ಷ ಹೇಳಿದೆ.
ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಅಧಿಕಾರದ ಗದ್ದುಗೆ ಏರಲು ಮ್ಯಾಜಿಕ್ ನಂಬರ್ 202ರ ಅವಶ್ಯಕತೆ ಇದೆ. ಈಗಾಗಲೇ ಬಿಜೆಪಿ ಮ್ಯಾಜಿಕ್ ನಂಬರ್ ಅನ್ನು ದಾಟಿ 262 ಸ್ಥಾನಗಳೊಂದಿಗೆ ಮುನ್ನುಗುತ್ತಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮತ್ತೊಮ್ಮೆ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. (ಏಜೆನ್ಸೀಸ್)
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..