ಆದಿಲ್ಬಾದ್: ಎದುರು ಮನೆಯ ವ್ಯಕ್ತಿಯಿಂದ ಲೈಂಗಿಕ ಕಿರುಕುಳ ಸಹಿಸದ ವಿವಾಹಿತೆ ಮಹಿಳೆಯೊಬ್ಬಳು ಸಾವಿನ ಹಾದಿ ಹಿಡಿದಿರುವ ಘಟನೆ ತೆಲಂಗಾಣದ ಆದಿಲ್ಬಾದ್ ಜಿಲ್ಲೆಯ ಪೆಂಚಿಕಲ್ಪೇಟ್ನಲ್ಲಿ ಶನಿವಾರ ನಡೆದಿದೆ.
ಸುಜಾತ ಮೃತ ದುರ್ದೈವಿ. ವಿವಾಹಿತೆ ಆಗಿರುವ ಸುಜಾತಾಗೆ ಓರ್ವ ಗಂಡು ಮಗು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತಾನು ವಾಸವಿದ್ದ ಎದುರು ಮನೆಯಲ್ಲಿ ನೆಲೆಸಿದ್ದ ಕೃಷ್ಣ ಎಂಬಾತ ಮೂರು ವರ್ಷಗಳಿಂದ ಸುಜಾತಾಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.
ಅನೇಕ ಬಾರಿ ಎಚ್ಚರಿಕೆ ನೀಡಿದಾದರೂ ತನ್ನ ಕೃತ್ಯವನ್ನು ಮಾತ್ರ ನಿಲ್ಲಿಸಿರಲಿಲ್ಲ. ಎರಡು ವರ್ಷದ ಹಿಂದೆ ಕೃಷ್ಣನ ಕಿರುಕುಳ ತಾಳದೇ ತನ್ನ ಗಂಡನೊಂದಿಗೆ ಸುಜಾತಾ ದೂರು ಸಹ ನೀಡಿದ್ದಳು. ಈ ವೇಳೆ ಕೃಷ್ಣನನ್ನು ಬಂಧಿಸಿದ್ದರು. ಬಿಡುಗಡೆಯಾಗಿದ್ದ ಕೃಷ್ಣ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದ. ಆದರೆ, ಕಿರುಕಳ ಸಹಿಸದೇ ಸುಜಾತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೀಟನಾಶಕ ಸೇವಿಸಿದ್ದ ಸುಜಾತಾಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಳು. ಆರೋಪಿ ಕೃಷ್ಣನಿಗೆ ಕಠಿಣ ಶಿಕ್ಷೆ ನೀಡುವಂತೆ ಸುಜಾತಾ ಕುಟುಂಬಸ್ಥರು ಪೊಲೀಸರ ಬಳಿ ಒತ್ತಾಯಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ. (ಏಜೆನ್ಸೀಸ್)