ನ್ಯೂಸ್

ದಾರೀಲಿ ಸಿಕ್ಕ ಚಿನ್ನವನ್ನು ಯಾಕೆ ಹಿಂದಿರುಗಿಸಿದ್ರಿ? ವಿದ್ಯಾರ್ಥಿಗಳ ಉತ್ತರ ಕೇಳಿ ಪೊಲೀಸರು ಫಿದಾ!

ಕೊಚ್ಚಿ: ತಮಗೆ ದೊರೆತಂತಹ ಒಂದು ಸವರನ್​ ಚಿನ್ನದ ಸರವನ್ನು ಕಳೆದುಕೊಂಡ ಮಾಲೀಕರಿಗೆ ಮರಳಿಸುವ ಮೂಲಕ ವಿದ್ಯಾರ್ಥಿಗಳು ಪ್ರಾಮಾಣಿಕತೆ ಮರೆದು, ಇತರರಿಗೆ ಮಾದರಿಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಲ್‌ ಟಿಕೆಟ್‌ ಪಡೆದು ವಾಪಸಾಗುತ್ತಿದ್ದಾಗ ಕಡಕ್ಕಮೊನ್‌ನ ಚೇಳನ್ನೂರಿನ ಪ್ರಯಾಗ್‌ ಗಾರ್ಡನ್‌ ಬಳಿ ವಿದ್ಯಾರ್ಥಿಗಳಿಗೆ ಚಿನ್ನದ ಸರ ಪತ್ತೆಯಾಗಿತ್ತು. ಕೂಡಲೇ ಅವರು ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಬಳಿಕ ಆಟೊದಲ್ಲಿ ಠಾಣೆಗೆ ತೆರಳಿ ಸರವನ್ನು ಹಸ್ತಾಂತರಿಸಿದರು. ಇದೀಗ ಆ ಸರವನ್ನು ಪೊಲೀಸರು ಮಾಲೀಕರಿಗೆ ಹಿಂತಿರುಗಿಸಿದ್ದಾರೆ.

ಈ ವೇಳೆ ಪೊಲೀಸರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ ಅವರು ನೀಡಿದ ಉತ್ತರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾರವನ್ನು ಏಕೆ ಹಿಂದಿರುಗಿಸಿದಿರಿ ಎಂದು ಕೇಳಿದಾಗ, ‘ಯಾರಾದರೂ ಸರಿಯೇ ಚಿನ್ನವನ್ನು ಕಷ್ಟಪಟ್ಟು ಸಂಪಾದಿಸಿದ ಖರೀದಿಸಿರುತ್ತಾಲ್ಲಲ್ಲವೇ? ಸರ್​​ ಎಂದು ಹೇಳಿದರು.

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೇರಳ ಪೊಲೀಸರು ತಮ್ಮ ಅಧಿಕೃತ ಪುಟದಲ್ಲಿ ಹಂಚಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. (ಏಜೆನ್ಸೀಸ್​)