ತಿರುಮಲ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಷೆ ಅವರು ಪತ್ನಿ ಸಮೇತರಾಗಿ ತಿರುಪತಿಗೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಶುಕ್ರವಾರ ಬೆಳಗ್ಗೆ ತಿರುಮಲಕ್ಕೆ ಆಗಮಿಸಿದ ಮಹಿಂದಾ ರಾಜಪಕ್ಷೆ ಮತ್ತು ಪತ್ನಿ ಶ್ರೀರಂಥಿ ರಾಜಪಕ್ಷೆ ಅವರನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದ ಜೆಇಒ ವೀರಬ್ರಹ್ಮ ಮತ್ತು ಸಿವಿಎಸ್ಒ ಗೋಪಿನಾಥ್ ಜಟ್ಟಿ ಸ್ವಾಗತಿಸಿದರು.
ದರ್ಶನದ ಬಳಿಕ ಮಹಿಂದಾ ರಾಜಪಕ್ಷೆ ದಂಪತಿ ರಂಗನಾಯಕುಲ ಮಂಟಪದಲ್ಲಿ ವೇದ ಪಂಡಿತರ ಬಳಿ ಆಶೀರ್ವಚನ ಪಡೆದರು. ಈ ವೇಳೆ ಜೆಇಒ ವೀರಬ್ರಹ್ಮ ಅವರು ದಂಪತಿಗೆ ಶ್ರೀವಾರಿಯ ಫೋಟೋ ಮತ್ತು ತೀರ್ಥಪ್ರಸಾದ ನೀಡಿ ಗೌರವಿಸಿದರು.
ಮಹಿಂದಾ ರಾಜಪಕ್ಷೆ ತಿರುಪತಿ ಭೇಟಿಯ ವೇಳೆ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ನಾರಾಯಣ ಸ್ವಾಮಿ ಕೂಡ ಉಪಸ್ಥಿತರಿದ್ದರು. (ಏಜೆನ್ಸೀಸ್)