ನ್ಯೂಸ್

ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಸಸ್ಪೆಂಡ್​!

ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದ ಪೇದೆಯನ್ನು ಅಮಾನತ್ತುಗೊಳಿಸಿ ಆದೇಶಿಸಲಾಗಿದೆ. ಇಲ್ಲಿನ ಗ್ರಾಮೀಣ ಠಾಣೆ ಪೇದೆ ರಾಜಶೇಖರ ಖಾನಾಪುರ ಈತ‌ನನ್ನು ಶನಿವಾರ ಅಮಾನತ್ತುಗೊಳಿಸಿದ್ದಾಗಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ತಿಳಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನನ್ನು ಕುರಿತು "ಪೊಲೀಸರನ್ನು ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೆ ಮನೆಗೆ ಹೋಗು ನೋಡೋಣ" ಎಂದು ಪೋಸ್ಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಪೇದೆಯ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಪೋಸ್ಟ್​ ವೈರಲ್​ ಬೆನ್ನಲ್ಲೇ ಕುರುಬ ಸಮಾಜದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಒತ್ತಾಯ ಮತ್ತು ದೂರು ಆಧರಿಸಿ ಪೇದೆಯನ್ನು ಅಮಾನತ್ತುಗೊಳಿಸಿದ್ದಾಗಿ ಎಸ್​ಪಿ ಎಚ್. ಡಿ. ಆನಂದಕುಮಾರ "ವಿಜಯವಾಣಿ" ಗೆ ಪ್ರತಿಕ್ರಿಯಿಸಿದ್ದಾರೆ.